ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಗೆಳೆಯ ಹಾಗೂ ಕುಸ್ತಿಪಟು ಸತ್ಯವೃತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರೋಹ್ಟಕ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಈ ಜೋಡಿಯ ಕುಟುಂಬದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು. ಆದಷ್ಟು ಬೇಗ ಮದುವೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
23 ವರ್ಷದ ಸಾಕ್ಷಿ ಮಲಿಕ್ ಇದೇ ವರ್ಷ ತನಗಿಂತ ಒಂದು ವರ್ಷ ಚಿಕ್ಕವನಾಗಿರುವ ಕುಸ್ತಿಪಟು ಸತ್ಯವೃತ್ ಕಾದಿಯಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 22 ವರ್ಷದ ಸತ್ಯವೃತ್ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಕುಸ್ತಿ ಶಾಲೆ ನಡೆಸುತ್ತಿದ್ದು, ಅರ್ಜುನ್ ಪ್ರಶಸ್ತಿ ಪುರಸ್ಕೃತ ಸತ್ಯವಾನ್ ಅವರ ಮಗ ಹಾಗೂ ವೃತ್ತಿಯಲ್ಲಿ ಕುಸ್ತಿಪಟು ಆಗಿದ್ದಾರೆ.