ಕ್ರೀಡೆ

ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚವ್ಹಾಣ್ ಡೇಂಘಿಗೆ ಬಲಿ

Lingaraj Badiger
ವಾರಣಾಸಿ: ದೇಶದ ಬಹುತೇಕ ಕಡೆಗಳಲ್ಲಿ ಮಾರಕ ರೋಗವಾಗಿ ಕಾಡುತ್ತಿರುವ ಡೇಂಘಿ ಜ್ವರಕ್ಕೆ ಉತ್ತರ ಪ್ರದೇಶದ ವಾರಾಣ ಮೂಲದ ರಾಷ್ಟ್ರೀಯ ಫುಟ್​ಬಾಲ್ ಆಟಗಾರ್ತಿ ಪೂನಂ ಚವ್ಹಾಣ್ ಅವರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಇಲ್ಲಿನ ಮಖ್ಬೂಲ್ ಅಲಂ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ವರ್ಷದ ಪೂನಂ ಅವರು ನಿನ್ನೆ ರಾತ್ರಿ 8.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪೂನಂ ಚವ್ಹಾಣ್ ಅವರು ಅಂತಾರಾಷ್ಟ್ರೀಯ ಮಹಿಳಾ ಫುಟ್​ಬಾಲ್ ತಂಡದಲ್ಲಿ ಗುರುತಿಸಿಕೊಂಡಿ ಉತ್ತರ ಪ್ರದೇಶದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. ಸೌತ್ ಏಷ್ಯನ್ ಗೇಮ್ಸ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದು ತಂದ ತಂಡದ ಭಾಗವಾಗಿದ್ದರು.
ಕಳೆದ ಕೆಲ ವರ್ಷಗಳಿಂದ ವಾರಾಣಸಿಯ ಸಿಗ್ರಾ ಸ್ಟೇಡಿಯಂನಲ್ಲಿ ಫುಟ್​ಬಾಲ್ ತರಬೇತುದಾರೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ರಾಜ್ಯ ಫುಟ್​ಬಾಲ್ ಚಾಂಪಿಯನ್​ಷಿಪ್​ಗೆ ತಯಾರಿ ನಡೆಸುತ್ತಿದ್ದರು.
SCROLL FOR NEXT