ಅಹಮದಾಬಾದ್: ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ಜಯ ಗಳಿಸುವ ಮೂಲಕ ಸತತ ಮೂರನೇ ಬಾರಿಗೆ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ತಮ್ಮ ಈ ಗೆಲುವನ್ನು ಉರಿ ಸೇನಾ ನೆಲೆ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಸೈನಿಕರಿಗೆ ಅರ್ಪಿಸಿದ್ದಾರೆ.
ವಿಜಯೋತ್ಸವದ ಬಳಿಕ ಭಾರತ ಕಬಡ್ಡಿ ಕೋಚ್ ಬಲ್ವಾನ್ ಸಿಂಗ್ ವಿಶ್ವಕಪ್ ಗೆಲುವನ್ನು ನಾವು ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸುತ್ತಿದ್ದೇವೆ. ಪಂದ್ಯಕ್ಕೂ ಮುನ್ನವೇ ಪ್ರಶಸ್ತಿಯನ್ನು ಇಡೀ ದೇಶಕ್ಕೆ ಅದರಲ್ಲೂ ಪ್ರಮುಖವಾಗಿ ಯೋಧರಿಗೆ ಸಲ್ಲಿಸುವ ನಿರ್ಧಾರ ಮಾಡಿದ್ದೇವು ಎಂದು ಹೇಳಿದ್ದಾರೆ.
ಸರ್ಕಾರದಿಂದ ಸನ್ಮಾನದ ನಿರೀಕ್ಷೆ ನಮ್ಮಲ್ಲಿಲ್ಲ. ದೇಶಕ್ಕಾಗಿ ಆಡುವುದು ಹಾಗೂ ಜನರ ಪ್ರೀತಿಯೆ ನಮಗೆ ಸನ್ಮಾನ ಎಂದು ಬಲ್ವಾನ್ ಸಿಂಗ್ ಹೇಳಿದ್ದಾರೆ.