ಧೋನಿಯ ಅದ್ಭುತ ಬ್ಲೈಂಡ್ ರನೌಟ್, ವಿಡಿಯೋ ವೈರಲ್
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ...
ರಾಂಚಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ.
ಧೋನಿ ತವರಾದ ರಾಂಚಿಯಲ್ಲಿ ನಡೆದ ಪಂದ್ಯದ ವೇಳೆ 46ನೇ ಓವರ್ ನಲ್ಲಿ 34 ರನ್ ಗಳಿಸಿದ್ದ ನ್ಯೂಜಿಲೆಂಡ್ ಆಟಗಾರ ರಾಸ್ ಟೇಲರ್ ರನ್ ಪಡೆಯಲು ಓಡುತ್ತಿದ್ದರು. ಈ ವೇಳೆ ಧೋನಿ ವಿಕೆಟ್ ನಿಂದ 10 ಅಡಿ ದೂರದಿಂದ ಚೆಂಡನ್ನು ವಿಕೆಟ್ ಹೊಡೆದು ಅವರನ್ನು ರನೌಟ್ ಮಾಡಿದ್ದಾರೆ.
ರನೌಟ್ ಮಾಡುವುದರಲ್ಲಿ ಏನು ವಿಶೇಷ ಅಂತಿರಾ. ವಿಕೆಟ್ ಗೆ ಬೆನ್ನು ಹಾಕಿ ನಿಂತರೂ ಧೋನಿ ಬಾಲ್ ಅನ್ನು ನೇರವಾಗಿ ವಿಕೆಟ್ ಗೆ ಬಡಿದಿದ್ದಾರೆ. ಈ ಸಾಧನೆಯನ್ನು ಬ್ಲೈಂಡ್ ರನೌಟ್ ಎಂದು ವರ್ಣಿಸಲಾಗಿದೆ. ಇದೀಗ ಧೋನಿಯ ಅದ್ಭುತ ಬ್ಲೈಂಡ್ ರನೌಟ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.