ಕ್ರೀಡೆ

ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಮಾತ್ರವಲ್ಲ, ಪ್ರತಿ ನಿತ್ಯ ಯೋಧರನ್ನು ನೆನೆಯಿರಿ: ಎಂ.ಎಸ್.ಧೋನಿ

Manjula VN

ನವದೆಹಲಿ: ಸ್ವಾತಂತ್ರ್ಯೋತ್ಸವ ದಿನ, ಗಣರಾಜ್ಯೋತ್ಸವ ದಿನ ಬಂದಾಗ ಎಲ್ಲರೂ ಯೋಧರು ನೆನೆಯಲು ಆರಂಭಿಸುತ್ತಾರೆ. ಯೋಧರನ್ನು ಕೇವಲ ರಾಷ್ಟ್ರೀಯ ದಿನಗಳಂದು ಮಾತ್ರವಲ್ಲ. ಪ್ರತೀನಿತ್ಯ ಅವರನ್ನು ನೆನೆಯುತ್ತಿರಬೇಕೆಂದು ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ಶನಿವಾರ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಸರಣಿಯನ್ನು ತಮ್ಮ ಕೈವಶಕ್ಕೆ ಮಾಡಿಕೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಯೋಧರ ಕುರಿತಂತೆ ದೇಶದ ಜನತೆಗೆ ಸಂದೇಶವನ್ನು ರವಾನಿಸಿದ್ದಾರೆ.

ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆ ಪಂದ್ಯದಲ್ಲಿ ಆಟಗಾರರು ತಮ್ಮ ಅಮ್ಮನ ಹೆಸರು ಇರುವ ಹೊಸ ಜೆರ್ನಿ ಬಗ್ಗೆ ಮಾತನಾಡಲು ಆರಂಭಿಸಿದ್ದರು. ನನ್ನ ಜೀವನದಲ್ಲಿ ಅಮ್ಮನ ಪಾತ್ರ ಮಹತ್ವದ್ದಾಗಿದೆ. ನಮ್ಮ ಹೆಸರಿನೊಂದಿಗೆ ಸದಾಕಾಲ ಅಪ್ಪನ ಹೆಸರು ಇರುತ್ತದೆ. ಆದರೆ. ಅಮ್ಮಂದಿರು ನಮಗಾಗಿ ಮಾಡಿದ ತ್ಯಾಗವನ್ನು ನಾವು ಗೌರವಿಸಬೇಕು. ಯೋಧರ ಸಹಾಯದಂತೆಯೇ ಅಮ್ಮನ ಸಹಾಯವೂ ಅತಗತ್ಯ. ಪ್ರತಿಯೊಬ್ಬ ಭಾರತೀಯನೂ ತಮ್ಮ ಅಮ್ಮಂದಿರ ತ್ಯಾಗಕ್ಕೆ ಪ್ರತಿನಿತ್ಯ ಅಭಿನಂದಿಸಬೇಕು. ಅಮ್ಮಂದಿರ ತ್ಯಾಗಕ್ಕೆ ಗೌರವ ಅರ್ಪಿಸುವ ಸಲುವಾಗಿಯೇ ಜೆರ್ಸಿಯಲ್ಲಿ ತಾಯಂದಿರ ಹೆಸರನ್ನು ಬರೆಯಲಾಗಿದೆ ಎಂದು ಹೇಳಿದರು.

ನಂತರ ಯೋಧರ ತ್ಯಾಗ ಹಾಗೂ ಬಲಿದಾನ ಕುರಿತಂತೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ. ನಮ್ಮ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇಂತಹ ಯೋಧರನ್ನು ಕೇವಲ ರಾಷ್ಟ್ರೀಯ ದಿನಗಳಂದು ಮಾತ್ರವಲ್ಲ, ಪ್ರತೀನಿತ್ಯ ಅವರಿಗೆ ಗೌರವ ಸಲ್ಲಿಸಿ ನೆನೆಯಬೇಕು ಎಂದು ಹೇಳಿದ್ದಾರೆ.

ಜನವರಿ.26 (ಗಣರಾಜ್ಯೋತ್ಸವ ದಿನ), ಆಗಸ್ಟ್ 15 (ಸ್ವಾತಂತ್ರ್ಯೋತ್ಸವ ದಿನ) ಬಂದ ಕೂಡಲೇ ಜನರು ಕಾರ್ಯಕ್ರಮ ಹಾಗೂ ಸಂಭ್ರಮವೆಂದು ಆಚರಿಸುತ್ತಾರೆ. ಆ ದಿನ ಪ್ರತಿಯೊಬ್ಬರು ಯೋಧರನ್ನು ನೆನೆಯುತ್ತಾರೆ. ಕೇವಲ ರಾಷ್ಟ್ರೀಯ ದಿನಗಳಂದು ಮಾತ್ರ ನಮ್ಮ ಯೋಧರನ್ನು ನೆನೆಯುವುದನ್ನು ಬಿಟ್ಟು, ಪ್ರತೀನಿತ್ಯ ಅವರಿಗೆ ಗೌರವ ಸಲ್ಲಿಸಿ, ನೆನೆಯಬೇಕಿದೆ ಎಂದಿದ್ದಾರೆ.

ಇದೇ ವೇಳೆ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಯೋಧನನ್ನು ಭೀಕರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿರುವ ಅವರು, ಯೋಧನ ಹತ್ಯೆ ನಿಜಕ್ಕೂ ದುರಾದೃಷ್ಟಕರ ಸಂಗತಿ. ಇದೊಂದು ಅನಾಗರಿಕ ವರ್ತನೆಯಾಗಿದ್ದು, ಪ್ರತೀಯೊಬ್ಬ ಭಾರತೀಯನಿಗೂ ಆಘಾತವಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT