ರೋಹ್ಟಕ್: ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಗೆಳೆಯ ಕುಸ್ತಿಪಟು ಸತ್ಯವೃತ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರೊಹ್ಟಕ್ ನ ನಂದಲ್ ಭವನದಲ್ಲಿ ಸಾಕ್ಷಿ ಮಲಿಕ್ ವಿವಾಹ ಸಮಾರಂಭ ನಡೆದಿದ್ದು ಹಲವಾರು ಗಣ್ಯರು, ಹಾಲಿ ಮಾಜಿ ಕ್ರೀಡಾಪಟುಗಳು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು.
23 ವರ್ಷದ ಸತ್ಯವೃತ್ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಕುಸ್ತಿ ಶಾಲೆ ನಡೆಸುತ್ತಿದ್ದಾರೆ. ಅರ್ಜುನ್ ಪ್ರಶಸ್ತಿ ಪುರಸ್ಕೃತರಾಗಿರುವ ಸತ್ಯವಾನ್ ಅವರ ಮಗ ಸತ್ಯವೃತ್.