ಕ್ರೀಡೆ

ವಿಶ್ವ ಹಾಕಿ ಲೀಗ್: ಭಾರತ ಮಹಿಳಾ ತಂಡ ಚಾಂಪಿಯನ್

Vishwanath S
ವೆಸ್ಟ್ ವಾಂಕೋವರ್(ಕೆನಡಾ): ಮಹಿಳೆಯರ ಹಾಕಿ ವಿಶ್ವ ಲೀಗ್ 2ನೇ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಚಿಲಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 
ಭಾನುವಾರ ನಡೆದ ಪಂದ್ಯದಲ್ಲಿ ಶೂಟೌಟ್ ಮೂಲಕ ಭಾರತ 2-0 ಗೋಲುಗಳಿಂದ ಚಿಲಿ ತಂಡವನ್ನು ಮಣಿಸಿತು. ಪಂದ್ಯದ ನಿಗದಿತ ವೇಳೆ ಮುಕ್ತಾಯಗೊಂಡಾಗ ಉಭಯ ತಂಡಗಳು ತಲಾ ಒಂದು ಗೋಲುಗಳಿಂದ ಡ್ರಾ ಸಾಧಿಸಿದ್ದವು. 
ಭಾರತ ಪರ ನಾಯಕಿ ರಾಣಿ ಹಾಗೂ ಮೋನಿಕಾ ತಲಾ ಒಂದು ಗೋಲು ಗಳಿಸಿದರೆ, ಭಾರತದ ಗೋಲ್ ಕೀಪರ್ ಸವಿತಾ ಟೂರ್ನಿಯ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಪಡೆದರು. 
SCROLL FOR NEXT