ನವದೆಹಲಿ: ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ವಿಶ್ವದ ನಂಬರ್ 2 ಆಟಗಾರ್ತಿ ಪಿವಿ ಸಿಂಧು ಅವರುನ್ನು ಬಿಡಬ್ಲ್ಯೂಎಫ್ ಅಥ್ಲೀಟ್ಸ್ ಕಮಿಷನ್ ಗೆ ಸ್ಪರ್ಧಿಸುತ್ತಿದ್ದಾರೆ.
ಪಿವಿ ಸಿಂಧು ಸೇರಿದಂತೆ ಜಗತ್ತಿನ ಒಂಬತ್ತು ಬ್ಯಾಡ್ಮಿಂಟನ್ ಆಟಗಾರರು ಬಿಡಬ್ಲ್ಯೂಎಫ್ ಅಥ್ಲೀಟ್ಸ್ ಕಮಿಷನ್ ನ ನಾಲ್ಕು ಹುದ್ದೆಗಳಿಗೆ ಸ್ಪರ್ಧಿಸುತ್ತಿದ್ದಾರೆ. ಮಾರ್ಚ್ 27ಕ್ಕೆ ನಾಮನಿರ್ದೇಶನ ಮಾಡಲು ಕೊನೆಯ ದಿನವಾಗಿದ್ದು ಸದ್ಯ 9 ಆಟಗಾರರು ಕಣದಲ್ಲಿದ್ದಾರೆ.
ಬಿಡಬ್ಲ್ಯೂಎಫ್ ಅಥ್ಲೀಟ್ಸ್ ಕಮಿಷನ್ ಸದಸ್ಯರಾದ ಯುಹಾನ್ ತಾನ್(ಬೆಲ್ಜಿಯಂ), ಹನ್ಸ್-ಕ್ರಿಸ್ಟೈನ್ ಸೋಲ್ಬರ್ಗ್(ಡೆನ್ಮಾರ್ಕ್) ಮತ್ತು ಗ್ರೇಸಿಯಾ(ಇಂಡೋನೇಷಿಯಾ) ಅವರ ಅಧಿಕಾರಾವಧಿ ಮೇ ತಿಂಗಳಲ್ಲಿ ಮುಕ್ತಾಯವಾಗಲಿದೆ.
ಪಿವಿ ಸಿಂಧು(ಭಾರತ), ಅಕ್ವಿಲೇ(ಲಿಥುವೇನಿಯ), ಇಡ್ವಿನ್ ಇಕ್ರಿಂಗ್(ಉಗಾಂಡ), ಕೊ ಕಿಯೆನ್ ಕಿಯೆಟ್(ಮಲೇಷ್ಯಾ), ಕಿರ್ಸ್ಟಿ ಗಿಲ್ಮೊರ್(ಸ್ಕಾಟಲ್ಯಾಂಡ್), ಲೂಯಿಸ್ ರಮೋನ್(ಮೆಕ್ಸಿಕೋ), ಮಾರ್ಕ್ ಝ್ವಿಬ್ಲೆರ್(ಜರ್ಮಿನಿ), ನಿಖಾರ್ ಗರ್ಗ್(ಭಾರತ), ಯೊ ಯೇನ್ ಸಿಯೆಂಗ್(ಕೊರಿಯಾ) ಕಣದಲ್ಲಿದ್ದಾರೆ.