ಭಾರತೀಯ ಶಟ್ಲರ್ ಬಿ. ಪ್ರಣೀತ್
ಸಿಂಗಾಪುರ್: ಸಿಂಗಾಪುರ್ ಓಪನ್ ಸೂಪರ್ ಸಿರೀಸ್ ನ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಶಟ್ಲರ್ ಬಿ.ಸಾಯಿ ಪ್ರಣೀತ್ ಕೊರಿಯಾದ ಲೀ ಡೋಂಗ್-ಕ್ಯೂನ್ ಅವರನ್ನು ನೇರ ಸೆಟ್ ಗಳಿಂದ ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ಜನವರಿ ತಿಂಗಳಲ್ಲಿ ಸೈಯದ್ ಮೋದಿ ಪ್ರಿಕ್ಸ್ ಗೋಲ್ಡ್ ನ ಅಂತಿಮ ಹಂತಕ್ಕೆ ಪ್ರವೇಶಿಸಿದ್ದ ಪ್ರಣೀತ್ ನಂತರ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ತಮ್ಮ ಅಭ್ಯಾಸ ಮತ್ತು ಕಠಿಣ ಪರಿಶ್ರಮವನ್ನು ಮುಂದುವರಿಸಿದ ಪ್ರಣೀತ್ ಮೂರು ಬಾರಿ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಗೆದ್ದಿದ್ದ ಕೊರಿಯಾದ ಲೀ ಅವರನ್ನು 21-6 21-8 ಸೆಟ್ ಗಳಿಂದ ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಹೈದರಾಬಾದ್ ಮೂಲದ 24 ವರ್ಷದ ಪ್ರಣೀತ್ ಕಳೆದ ವರ್ಷ ಕೆನಡಾ ಓಪನ್ ಸೂಪರ್ ಸಿರೀಸ್ ಪಂದ್ಯ ಗೆದ್ದಿದ್ದರು.
ಇನ್ನೊಂದೆಡೆ ಕಿಡಂಬಿ ಶ್ರೀಕಾಂತ್ ಅವರು ಸಹ ಸಿಂಗಾಪುರ ಓಪನ್ ಸೂಪರ್ ಸಿರೀಸ್ ನಲ್ಲಿ 21-13, 21-14 ನೇರ ಸೆಟ್ ಗಳಿಂದ ಇಂಡೋನೇಷಿಯಾದ ಬ್ಯಾಡ್ಮಿಂಟನ್ ಆಟಗಾರ ಆಂಟೊನಿ ಸಿನಿಸುಕ ಗಿಂಟಿಂಗ್ ಅವರನ್ನು 17 ನಿಮಿಷಗಳ ಆಟದಲ್ಲಿ ಮಣಿಸಿದರು.
ಇದೀಗ ಫೈನಲ್ ಪಂದ್ಯದಲ್ಲಿ ಭಾರತದವರೇ ಆದ ಕಿಡಂಬಿ ಶ್ರೀಕಾಂತ್ ಮತ್ತು ಬಿ.ಸಾಯಿ ಪ್ರಣೀತ್ ಮುಖಾಮುಖಿಯಾಗಲಿದ್ದಾರೆ.