ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಸ್ಟ್ರೇಲಿಯಾ ಓಪನ್‌ ಗೆದ್ದಾಗ ಸೆರೆನಾ ವಿಲಿಯಮ್ಸ್‌ 2 ತಿಂಗಳ ಗರ್ಭಿಣಿ!

ಅಮೆರಿಕದ ಸೆರೆನಾ ವಿಲಿಯಮ್ಸ್‌ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ತನ್ನ ಅಕ್ಕ ವೀನಸ್‌ ಅವರ ವಿರುದ್ಧ...

ಸೆರೆನಾ ವಿಲಿಯಮ್ಸ್‌
Lingaraj Badiger
Updated On : 20 Apr 2017, 4:32 am
ಟೆನ್ನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್‌ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ತನ್ನ ಅಕ್ಕ ವೀನಸ್‌ ಅವರ ವಿರುದ್ಧ ಗೆಲ್ಲುವ ಮೂಲಕ ದಾಖಲೆಯ 23ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ಹಳೆ ಸುದ್ದಿ. ಈಗ ಹೊಸ ವಿಚಾರ ಏನೆಂದರೆ ಈ ವೇಳೆ ಸೆರೆನಾ ಎರಡು ತಿಂಗಳ ಗರ್ಭಿಣಿಯಾಗಿದ್ದರು.
ಸೆರೆನಾ ವಿಲಿಯಮ್ಸ್‌ ಅವರು ತಾವು ತಾಯಿಯಾಗುತ್ತಿರುವುದನ್ನು ಖಚಿತಪಡಿಸಿದ್ದು, ಬುಧವಾರ ಸ್ನ್ಯಾಪ್‌ಚಾಟ್‌ನಲ್ಲಿ ತನ್ನ ಫೋಟೋ ಪ್ರಕಟಿಸಿ, ಅದರ ಮೇಲೆ ‘20 ವಾರಗಳು’ ಎನ್ನುವ ಅಡಿ ಬರಹದೊಂದಿಗೆ ಗರ್ಭಿಣಿಯಾಗಿರುವ ವಿಷಯ ಬಹಿರಂಗಗೊಳಿಸಿದ್ದಾರೆ.
35 ವರ್ಷದ ಸೆರೆನಾ ಮುಂದಿನ ವಾರದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಲಿದ್ದು, ಈ  ವರ್ಷ ಯಾವುದೇ ಪಂದ್ಯಗಳಲ್ಲಿ ಆಡುತ್ತಿಲ್ಲ. 2018ರಲ್ಲಿ ಪುನಃ ಟೆನ್ನಿಸ್‌ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೆರೆನಾ ಅವರ ವಕ್ತಾರರೊಬ್ಬರು ತಿಳಿಸಿರುವುದಾಗಿ ರಾಯ್‌ಟರ್ಸ್‌ ವರದಿ ಮಾಡಿದೆ.

Advertisement

Advertisement

ಸದ್ಯ 20 ವಾರಗಳ ಗರ್ಭಿಣಿ ಎಂದರೆ, ಇದೇ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಆಡುವಾಗ 2 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.
ಅಂಥ ಸ್ಥಿತಿಯಲ್ಲಿಯೂ ಅತ್ಯುತ್ತಮ ಆಟವಾಡಿದ್ದರ ಕುರಿತು ಸೆರೆನಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments