ನವದೆಹಲಿ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಖ್ಯಾತ ಬ್ಯಾಡ್ಮಿಟನ್ ಆಟಗಾರ್ತಿ ಪಿವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಸಿಂಧು ಇತ್ತೀಚೆಗೆ ಇಂಡಿಯಾ ಓಪನ್ ನಲ್ಲಿ ಚಾಂಪಿಯನ್ ಆಗುವ ಮೂಲಕ ವಿಶ್ವ ನಂ.2 ಶ್ರೇಯಾಂಕಕ್ಕೇರಿದ್ದರು. ಇದು ಸಿಂಧು ಅವರ ಜೀವನ ಶ್ರೇಷ್ಠ ಶ್ರೇಯಾಂಕ ಸಾಧನೆಯಾಗಿದೆ.
ಮಲೇಷ್ಯಾ ಓಪನ್ ಮತ್ತು ಸಿಂಗಾಪುರ ಓಪನ್ ಸೂಪರ್ ಸೀರಿಸ್ ನ ಸೋಲಿನಿಂದಾಗಿ ಕಳೆದ ವಾರ ಸಿಂಧು 5ನೇ ಸ್ಥಾನಕ್ಕೆ ಕುಸಿದಿದ್ದರು.