ಕ್ರೀಡೆ

ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

Vishwanath S
ಪ್ರೋ ಕಬಡ್ಡಿ 5ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದೆ. 
ನಿನ್ನೆ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡ 32-31 ಅಂತರದಿಂದ ರೋಚಕ ಜಯ ದಾಖಲಿಸಿತು. 
ಮೊದಲಾರ್ಧದಲ್ಲಿ 11 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ತಂಡ ದ್ವಿತೀಯಾರ್ಧದಲ್ಲಿ ಕೊಂಚ ಎಡವಿತು. ಬುಲ್ಸ್ ತಂಡವನ್ನು ಎರಡು ಬಾರಿ ಆಲ್ ಔಟ್ ಮಾಡುವ ಮೂಲಕ ತಮಿಳ್ ತಲೈವಾಸ್ ತಂಡ ಗೆಲುವಿನ ಹಂಚಿಗೆ ಬಂದಿದ್ದು, ಆದರೆ ರೋಹಿತ್ ಕುಮಾರ್ ಅವರ ಕೊನೆಯ ಅಂಕದೊಂದಿಗೆ ಪಂದ್ಯ ಜಯ ಗಳಿಸುವಲ್ಲಿ ಸಾಧ್ಯವಾಯಿತು.
SCROLL FOR NEXT