ಕ್ರೀಡೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಜಾವಲಿನ್ ಥ್ರೋ ನಲ್ಲಿ ಭಾರತದ ದೇವಿಂದರ್ ಸಿಂಗ್ ಕಂಗ್ ದಾಖಲೆ!

Srinivasamurthy VN

ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ದೇವಿಂದರ್ ಸಿಂಗ್ ಕಾಂಗ್ ಇತಿಹಾಸ ನಿರ್ಮಿಸಿದ್ದು, ಫೈನಲ್ ಪ್ರವೇಶ ಮಾಡುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಗುರುವಾರ ನಡೆದ ಅರ್ಹತಾ ಸುತ್ತಿನ "ಬಿ" ಗ್ರೂಪ್‌ ನ ಸ್ಪರ್ಧೆಯಲ್ಲಿ ದೇವಿಂದರ್ ಸಿಂಗ್ ಕಾಂಗ್ ಅವರು 84.22ಮೀ ದೂರಕ್ಕೆ ಜಾವೆಲಿನ್ ಎಸೆದು ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಫೈನಲ್‌ ಗೆ ಅರ್ಹತೆ ಪಡೆಯಲು ಸ್ಪರ್ಧಿಗಳು 83 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಬೇಕಿತ್ತು. ಅದರಂತೆ ಮೊದಲ 2 ಪ್ರಯತ್ನದಲ್ಲಿ ವಿಫಲರಾದ ಕಾಂಗ್, ಅವರು ಮೊದಲ ಪ್ರಯತ್ನದಲ್ಲಿ 82.22 ಮೀ, ಎರಡನೇ ಪ್ರಯತ್ನದಲ್ಲಿ 82.14 ಮೀ. ಮತ್ತು ಮೂರನೇ ಪ್ರಯತ್ನದಲ್ಲಿ 84.22 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಫೈನಲ್ ಸ್ಪರ್ಧೆಗೆ ನೇರ ಪ್ರವೇಶ ಪಡೆದರು. ಕೊನೆಯ ಪ್ರಯತ್ನದಲ್ಲಿ ಅವರು ಎಸೆದ 84.22 ಮೀಟರ್ ವರೆಗಿನ ದೂರವು ಅವರ ಈವರೆಗಿನ ವೃತ್ತಿಜೀವನದಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನ ಎಂದೆನಿಸಿದೆ.

ಭುಜದ ನೋವಿನ ನಡುವೆಯೂ ಐತಿಹಾಸಿಕ ಸಾಧನೆ
ಇನ್ನು ಐತಿಹಾಸಿಕ ಸಾಧನೆಗೂ ಮುನ್ನ ದೇವಿಂದರ್ ಸಿಂಗ್ ಅವರು  ಭುಜದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಂತೆ. ಆದರೆ ಬಳಿಕ ಫಿಸಿಯೋಗಳ ನೆರವಿನಿಂದ ಚಿಕಿತ್ಸೆ ಪಡೆದ ದೇವಿಂದರ್ ಸಿಂಗ್ ಈ ಸಾಧನೆಗೈದಿದ್ದಾರೆ.

ಇನ್ನು ಪೈನಲ್ ಪಂದ್ಯ ನಾಳೆ ಅಂದರೆ ಆಗಸ್ಟ್ 12ರಂದು ನಡೆಯಲಿದೆ. ಭಾರತದ ಮತ್ತೋರ್ವ ಆಟಗಾರ ನೀರಜ್ ಚೋಪ್ರಾ ಈ ವಿಭಾಗದಲ್ಲಿ ವಿಫಲ ಅನುಭವಿಸಿ ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ‘ಎ’ ಗುಂಪಿನ ಅರ್ಹತಾ ಸುತ್ತಿನಲ್ಲಿ ಭಾರತದ ಪರ ಆಟವಾಡಿದ ನೀರಜ್ ಚೋಪ್ರಾ ಮೂರು ಪ್ರಯತ್ನಗಳಲ್ಲೂ ವಿಫಲರಾದರು. ಅವರಿಗೆ ಮೂರನೇ ಯತ್ನದಲ್ಲಿ 80.54 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಲು ಸಾಧ್ಯವಾಯಿತು.

SCROLL FOR NEXT