ಕ್ರೀಡೆ

2020 ರ ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ:ವಿಜಯ್ ಕುಮಾರ್

Raghavendra Adiga
ಇಂಡೋರ್: 2016 ರ ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ಗಳು ನೀಡಿದ್ದ ಕೆಟ್ತ ಪ್ರದರ್ಶನಕ್ಕೆ ಬದಲು ಬರುವ 2020 ಕ್ರೀಡಾಕೂಟದಲ್ಲಿ ಸುಧಾರಿತ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಏಸ್ ಮಾರ್ಕ್ಸ್ ಮ್ಯಾನ್ ವಿಜಯ್ ಕುಮಾರ್ ಇಂದು ತಿಳಿಸಿದ್ದಾರೆ.
ಪದಕ ಭರವಸೆಯಲ್ಲಿದ್ದ ಭಾರತೀಯ ಶೂಟರ್ ಗಳು ರಿಯೊದಲ್ಲಿ ನಡೆದ 2016 ರ ಒಲಂಪಿಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಲ್ಲದೆ 12 ಸದಸ್ಯರ ತಂಡವು ಒಂದೇ ಒಂದು ಪದಕವನ್ನು ಗೆದ್ದುಕೊಳ್ಳಲು ಸಹ ವಿಫಲವಾಗಿತ್ತು.
ಶೂಟರ್ ಗಳು ಈ ಅಧ್ಯಾಯವನ್ನು ಹಿಂದೆ ಬಿಟ್ಟು 2020 ರ ಒಲಂಪಿಕ್ ಕ್ರೀಡಾಕೂಟದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.
"2020 ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ದೇಶದ ಶೂಟರ್ ಗಳು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು 2004 ರ ಲಂಡನ್ ಒಲಿಂಪಿಕ್ಸ್ನಲ್ಲಿ 25 ಮೀಟರ್ ರಾಪಿಡ್ ಫೈರ್ ಪಿಸ್ತೋಲ್ನಲ್ಲಿ ನಡೆದ ಬೆಳ್ಳಿ ಪದಕ ಗೆದ್ದ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
"2004 ರಿಂದ, ದೇಶದ ಶೂಟರ್ ಗಳ ಕಾರ್ಯಕ್ಷಮತೆ ಸುಧಾರಿಸಿದೆ, 2016 ರ ಒಲಂಪಿಕ್ಸ್ನಲ್ಲಿ ನಾವು ಯಾವುದೇ ಪದಕವನ್ನು ಗೆಲ್ಲಲಿಲ್ಲವಾದರೂ, ಕೆಲವೊಂದು ಶೂಟರ್ ಗಳು ತಮ್ಮ ಸಮಾರಂಭದ ಕೊನೆಯ ಸುತ್ತಿನವರೆಗೂ ಹೋದರು ಮತ್ತು ಉತ್ತಮವಾಗಿ ಆಡಿದರು" ಎಂದು ಅವರು ಹೇಳಿದರು.
31 ವರ್ಷ ವಯಸ್ಸಿನ ಕುಮಾರ್ 2020 ಕ್ರೀಡಾಕೂಟದಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಲು ತರಬೇತುದಾರರ ಸಹಾಯದಿಂದ ತಾನು ಸಹ ತರಬೇತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.
ಇದಕ್ಕೆ ಮೊದಲು ಕುಮಾರ್ ಮುಂದಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2018 ಆಸ್ಟ್ರೇಲಿಯಾದಲ್ಲಿ) ಮತ್ತು ಏಷ್ಯನ್ ಗೇಮ್ಸ್ನಲ್ಲಿ (2018 ಇಂಡೋನೇಷ್ಯಾದಲ್ಲಿ) ಬಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಗುರಿ ಇಟ್ಟುಕೊಂಡಿದ್ದಾರೆ. 
ಎಮರಾಲ್ಡ್ ಹೈಟ್ಸ್ ಶಾಲೆಯಲ್ಲಿ ರಾಜ್ಯದ ಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಲು ಕುಮಾರ್ ಆಗಮಿಸಿದ್ದರು. 
SCROLL FOR NEXT