ಭಯೋತ್ಪಾದಕ ಧಾಳಿಗಳಿಂದ ನೋಂದಿರುವ ರಾಫೆಲ್ ನಡಾಲ್ 
ಕ್ರೀಡೆ

ಬಾರ್ಸಿಲೋನಾ ಧಾಳಿಗೆ ಮರುಗಿದ ವಿಶ್ವದ ನಂ 1 ಆಟಗಾರ ನಡಾಲ್

ಸ್ಪೇನ್ ನ ರಾಫೆಲ್ ನಡಾಲ್, ಮೂರು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ವಿಶ್ವದ ನಂಬರ್ ಒನ್ ಶ್ರೇಯಾಂಕ ತಲುಪಿದರು.

ಸಿನ್ಸಿನಾಟಿ: ಸ್ಪೇನ್ ನ ರಾಫೆಲ್ ನಡಾಲ್, ಮೂರು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ವಿಶ್ವದ ನಂಬರ್ ಒನ್ ಶ್ರೇಯಾಂಕ ತಲುಪಿದರು. ಆದರೆ ಸ್ಪೇನ್ ನಡೆದಿರುವ ಭಯೋತ್ಪಾದಕ ಧಾಳಿಗಳಿಂದ ಅವರು ಬಹಳಷ್ಟು ನೊಂದಿದ್ದರು. ಸ್ಪೇನ್ ಡಾಳಿಯಲ್ಲಿ ಮೃತಪಟ್ಟವರ ಸ್ಮರಣೆಗಾಗಿ ಅವರು ತಮ್ಮ ಈ ಸರಣಿಯ ಪಂದ್ಯಗಳಲ್ಲಿ ತಮ್ಮ ಕೈಗಳಿಗೆ ಕಪ್ಪು ರಿಬ್ಬನ್ ಧರಿಸಿ ಆಟವಾಡಿದ್ದರು. 
"ಸ್ಪೇನ್ ಗೆ ಏನಾಗಿದೆ? ಎಲ್ಲರೂ ನಾಶ ಹೊಂದುತ್ತಿದ್ದಾರೆ. ನನಗೂ ಸಹ ಈ ವಿನಾಶದ ಭಯ ಕಾಡುತ್ತಿದೆ". ನಡಾಲ್ ಶುಕ್ರವಾರ ತಿಳಿಸಿದರು. 
"ಬಾರ್ಸಿಲೋನಾದಲ್ಲಿ ಕಠಿಣ ಪರಿಸ್ಥಿತಿಯಲ್ಲಿರುವ ಎಲ್ಲಾ ಕುಟುಂಬ್ವದವರಿಗೆ ನಿಮ್ಮ ಸಹಾನುಭೂತಿ ಇರಲಿ". ನಡಾಲ್ ಮುಂದುವರಿದು ಸೇರಿಸಿದ್ದರು. 
ಸ್ಪ್ಯಾನಿಷ್ ಪ್ರತಿಸ್ಪರ್ಧಿ ಆಲ್ಬರ್ಟ್ ರಾಮೋಸ್-ವಿನೋಲಸ್ ಮತ್ತು ವಿಂಬಲ್ಡನ್ ಮಹಿಳಾ ಚಾಂಪಿಯನ್ ಗಾರ್ಬಿನ್ ಮುಗುರುಜಾ ಸಹ ಕಪ್ಪು ರಿಬ್ಬನ್ಗಳನ್ನು ಧರಿಸಿ ಆಟವಾಡಿದ್ದರು.
ನಡಾಲ್, 15 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿದ್ದು, ಜೂನ್ ನಲ್ಲಿ 10 ನೇ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು. ಈಗ ಅವರು ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ಪ್ರವೇಶಿಸಿದ್ದಾರೆ, ಇದು ಆಗಸ್ಟ್ 28 ರಿಂದ ನ್ಯೂಯಾರ್ಕ್ನಲ್ಲಿ ಆರಂಭವಾಗಲಿದೆ, ಮೊಣಕಾಲು ಗಾಯಗಳು ಮತ್ತು ಹಿನ್ನಡೆಗಳ ನಂತರ ಮತ್ತೆ ಪ್೦ರಥಮ ಶ್ರೇಯಾಂಕಿತರಾಗಿದ್ದಾರೆ ಎನ್ನುವುದು ಗಮನಾರ್ಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ