ಪಿ.ವಿ. ಸಿಂಧು 
ಕ್ರೀಡೆ

ಪದಕದ ಬಣ್ಣವನ್ನು ಬದಲಾಯಿಸಲು ಹೋರಾಡುತ್ತೇನೆ: ಪಿ ವಿ ಸಿಂಧು

ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಸವಾಲನ್ನು ಮುಂದುವರಿಸಿರುವ, ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ.

ಗ್ಲ್ಯಾಸ್ಗೋ: ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸವಾಲನ್ನು ಮುಂದುವರಿಸಿರುವ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ಬಾರಿಯ ಪದಕಗಳ ಬಣ್ಣವನ್ನು ಬದಲಿಸುವುದಾಗಿ ವಿಶ್ವಾಸವಿರಿಸಿಕೊಂಡಿದ್ದಾರೆ.
"ಆಸ್ಟ್ರೇಲಿಯಾ ಓಪನ್ ನಂತರದಲ್ಲಿ ಎರಡು ತಿಂಗಳ ಸಮಯ ದೊರಕಿದೆ. ಇದು ನಾನು ಇನ್ನಷ್ಟು ಪ್ರಾಕ್ಟೀಸ್ ಮಾಡಲು ಅನುಕೂಲವಾಯಿತು ವಿಶ್ವ ಚಾಂಪಿಯನ್‌ಷಿಪ್‌ನಲ್ಲೇ ಶ್ರೇಷ್ಠ ಪ್ರದರ್ಶನ ತೋರಲು ಸಂಪೂರ್ಣವಾಗಿ ಸಜ್ಜಾಗಿದ್ದು ಪದಕದ ನಿರೀಕ್ಷೆಯಲ್ಲಿದ್ದೇನೆ. ಜತೆಗೆ ಈ ಹಿಂದೆ ಗೆದ್ದ ಪದಕ (ಕಂಚು) ದ ಬಣ್ಣವನ್ನು ಈ ಬಾರಿ ಬದಲಿಸುವ ಗುರಿ ಹೊಂದಿದ್ದೇನೆ,'' ಸಿಂಧು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ನಾನು ಖಂಡಿತವಾಗಿ ಇಲ್ಲಿ ಪದಕವನ್ನು ಜಯಿಸುತ್ತೇನೆ ಮತ್ತು , ಈ ಬಾರಿ ಕಂಚಿನ ಪದಕಕ್ಕಿಂತಲೂ ಉತ್ತಮ ಸಾಧನೆ ಮಾಡುವೆನು ಎನ್ನುವ ಆಶಾಭಾವನೆ ತಾಳಿದ್ದೇನೆ, ಇದಕ್ಕಾಗಿ ಹೋರಾಡುತ್ತೇನೆ" ಎಂದು ಹೈದರಾಬಾದ್ ನ ಟೆನಿಸ್ ಪ್ರತಿಭೆ ಸಿಂಧು ಹೇಳಿದರು. 
ಗ್ಲಾಸ್ಗೊದಲ್ಲಿ ಸೋಮವಾರ ಆರಂಭವಾಗಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸಿಂಧೂ ಭಾರತಕ್ಕೆ ಪದಕದ ಭರವಸೆ ಹುಟ್ಟಿಸಿದ್ದಾರೆ.
2013 ಮತ್ತು 2014ರ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧೂ ಕಂಚಿನ ಪದಕ ಗೆದ್ದಿದ್ದರು
ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಸಿಂಧೂ, ಕೊರಿಯಾದ ಕಿಮ್‌ ಹ್ಯೊ ಮಿನ್‌ ಅಥವಾ ಈಜಿಪ್ತ್‌ನ ಹಾಡಿಯಾ ಹೊಸ್ನಿ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!