ಕ್ರೀಡೆ

ಗೆಲುವಿನೊಂದಿಗೆ ಬಾಕ್ಸಿಂಗ್ ಜಗತ್ತಿಗೆ ವಿದಾಯ ಹೇಳಿದ ಮೇವೆದರ್

Raghavendra Adiga
ಲಾಸ್ ವೇಗಾಸ್: ಶತಮಾನದ ಸೂಪರ್ ಫೈಟ್ ಎಂದೇ ಹೇಳಲಾಗಿದ್ದ ಅತ್ಯಂತ ರೋಚಕ ಮುಖಾಮುಖಿಯನ್ನು ಜಯಿಸಿದ ಅಮೆರಿಕದ ಫ್ಲಾಯ್ಡ್ ಮೇವೆದರ್ ಬಾಕ್ಸಿಂಗ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ನಿನ್ನೆ ತಡ ರಾತ್ರಿ ಪಂದ್ಯದ 10 ಸುತ್ತುಗಳ ವರೆಗೂ ಸಾಗಿದ ರೋಚಕ ಹಣಾಣಿಯಲ್ಲಿ ಕಾನರ್ ಮೆಕ್‌ಗ್ರೆಗರ್ ರನ್ನ ಹಿಮ್ಮೆಟ್ಟಿಸಿದ ಮೇವೆದರ್ ಬಾಕ್ಸಿಂಗ್ ಜಗತ್ತಿನ ಮಹಾರಾಜನಾಗಿ ಮೆರೆದರು.
ಎರಡು ವರ್ಷಗಳ ಹಿಂದೆಯೇ ನಿವೃತ್ತಿ ಘೋಷಿಸಿದ್ದ ಮೇವೆದರ್ ವೃತ್ತಿಜೀವನದಲ್ಲಿ 50 ಗೆಲುವುಗಳ ದಾಖಲೆಯನ್ನು ಪೂರ್ಣಗೊಳಿಸುವ ಗುರಿಯೊಡನೆ ಮತ್ತೆ ಬಾಕ್ಸಿಂಗ್ ರಿಂಗ್‌‌ ಒಳಗೆ ಪ್ರವೇಶಿಸಿದ್ದರು. ನಿನ್ನೆಯ ಗೆಲುವಿನೊಡನೆ 50-0 ದಾಖಲೆ ಪೂರ್ಣಗೊಳಿಸಿದ  ಮೇವೆದರ್  ಈ ಗೆಲುವಿನೊಡನೆ ತಾವು ನಿವೃತ್ತಿ ಹೊಂದುವುದಾಗಿ ಘೋಷಿಸಿದರು.
ತಮ್ಮ ವೃತ್ತಿ ಜೀವನದಲ್ಲಿ ಸೋಲಿಲ್ಲದ ಸರದಾರನಾಗಿ ಮುಂದುವರಿದಿದ್ದ ಮೇವೆದರ್ ಕೋಟಿಗಟ್ಟಲೆ ಹಣವನ್ನು ಗಳಿಸಿಕೊಂಡಿದ್ದಾರೆ.
SCROLL FOR NEXT