ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಯುವಕರು ಕಂಪ್ಯೂಟರ್ ಬಿಟ್ಟು ಮೈದಾನಕ್ಕಿಳಿಯಬೇಕು: ಪ್ರಧಾನಿ ಮೋದಿ

ಯುವ ಜನತೆ ಸದಾ ಕಾಲ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆಯಲ್ಲೇ ಕಾಲ ಕಳೆಯುತ್ತಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಂಪ್ಯೂಟರ್ ಬಿಟ್ಟು...

ಕ್ರಿಕೆಟ್ ಆಡುತ್ತಿರುವ ಯುವಕರು(ಸಂಗ್ರಹ ಚಿತ್ರ)
Vishwanath S
Updated On : 28 Aug 2017, 10:26 am
ನವದೆಹಲಿ: ಯುವ ಜನತೆ ಸದಾ ಕಾಲ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆಯಲ್ಲೇ ಕಾಲ ಕಳೆಯುತ್ತಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಂಪ್ಯೂಟರ್ ಬಿಟ್ಟು ಮೈದಾನಕ್ಕಿಳಿಯಿರಿ ಎಂದು ಹೇಳಿದ್ದಾರೆ. 
ಕಂಪ್ಯೂಟರ್ ಗಳಲ್ಲಿ ಆಟಗಳನ್ನು ಆಡುವ ಬದಲು ಮೈದಾನದಲ್ಲಿ ಆಡಿ ಅದು ನಿಮ್ಮ ಬೌದ್ಧಿಕ ಜ್ಞಾನ ಮತ್ತು ದೇಹವನ್ನು ಸದೃಢವಾಗಿಡುತ್ತದೆ. ಮೈದಾನದಲ್ಲಿ ಹೆಚ್ಚು ಬೆವರಿಳಿಸಿದಷ್ಟು ನೀವು ಆರೋಗ್ಯವಾಗಿರುತ್ತೀರಾ ಎಂದು ಹೇಳಿದ್ದಾರೆ. 
ಮನ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಯುವಜನತೆಗೆ ಈ ರೀತಿ ಹೇಳಿದ್ದಾರೆ. ಜತೆಗೆ ಕ್ರೀಡಾ ಸಚಿವಾಲಯ ಪ್ರತಿಭಾನ್ವಿತರಿಗಾಗಿ ನೂತನ ವೆಬ್ ಸೈಟ್ ಬಿಡುಗಡೆ ಮಾಡುತ್ತಿದ್ದು ಇದರಿಂದ ಯಾರೂ ಬೇಕಿದ್ದರೂ ಉಪಯೋಗ ಪಡೆಯಬಹುದು ಎಂದು ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement