ಮುಂಬೈ: ವಾಣಿಜ್ಯ ನಗರಿ ಮುಂಬೈ ವರುಣನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದ್ದು ರಸ್ತೆಗಳು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ ಬಾಲಿವುಡ್ ನಟಿ ಲಾರಾ ದತ್ತಾ ಅವರು ಮಾಡಿರುವ ಉಪಾಯ ಭಾರೀ ಸದ್ದು ಮಾಡಿದೆ.
ಮುಂಬೈನಲ್ಲಿ ನೆಲೆಸಿರುವ ಭಾರತದ ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಪತ್ನಿ ಲಾರಾ ದತ್ತಾ ಅವರು ಮಳೆಯ ನೀರಿನಿಂದ ತಪ್ಪಿಸಿಕೊಳ್ಳಲು ಮನೆಯ ಮುಖ್ಯದ್ವಾರದಲ್ಲಿ ಟವೆಲ್ ಗಳನ್ನು ಸಾಲಾಗಿ ಅಡ್ಡಲಾಗಿ ಇಟ್ಟಿದ್ದಾರೆ.