ಇದೇ 23ಕ್ಕೆ ವಿಜೇಂದರ್-ಘಾನಾ ಬಾಕ್ಸರ್ ಅಮುಜು ನಡುವೆ ಬಿಗ್ ಫೈಟ್
ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಘಾನಾದ ಇಮೆಸ್ಟ್ ಅಮುಜು ವಿರುದ್ಧ ಇದೇ ಡಿಸೆಂಬರ್ 23ರಂದು ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ...
ನವದೆಹಲಿ: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಘಾನಾದ ಇಮೆಸ್ಟ್ ಅಮುಜು ವಿರುದ್ಧ ಇದೇ ಡಿಸೆಂಬರ್ 23ರಂದು ಬಾಕ್ಸಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.
ಡಬ್ಲ್ಯುಬಿಒ ಓರಿಯಂಟಲ್ ಮತ್ತು ಏಷ್ಯಾ ಫೆಸಿಫಿಕ್ ಸೂಪರ್ ಮಿಡಲ್ ವೇಟ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಇಮೆಸ್ಟ್ ಅಮುಜು ವಿರುದ್ಧ ವಿಜೇಂದರ್ ಸಿಂಗ್ ಹೋರಾಟ ನಡೆಸಲಿದ್ದಾರೆ. ವಿಜೇಂದರ್ ಸಿಂಗ್ ಸತತ 9 ಫೈಟ್ ಗಳನ್ನು ಗೆದ್ದು ಅಜೇಯರಾಗಿ ಉಳಿದಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ನಂ.1 ಬಾಕ್ಸರ್ ಜುಲ್ಫಿಕರ ಮೈಮೈತ್ ಅಲಿ ವಿರುದ್ಧ ಕೊನೆ ಪಂದ್ಯವನ್ನು ಆಡಿದ್ದರು.
ಇಮೆಸ್ಟ್ ಅನುಜು ನಂತರ ವಿಜೇಂದರ್ ಮುಂದಿನ ವರ್ಷ ಮಾರ್ಚ್ ನಲ್ಲಿ ಬ್ರಿಟನ್ ನ ರಾಕಿ ಫೀಲ್ಡಿಂಗ್ ವಿರುದ್ಧ ಸೆಣಸಲಿದ್ದಾರೆ. ಇಮೆಸ್ಟ್ ಅನುಜು ಈ ಹಿಂದೆ 26 ಪಂದ್ಯಗಳನ್ನು ಆಡಿದ್ದು ಅದರಲ್ಲಿ 23 ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ ನಲ್ಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.