ವಿಶ್ವ ಹಾಕಿ ಲೀಗ್ ಫೈನಲ್: ಬೆಲ್ಜಿಯಂ ನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ
ಭುವನೇಶ್ವರ್: ಒಡಿಶಾದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್ಸ್ ನಲ್ಲಿ ಭಾರತ ಸೆಮಿ ಫೈನಲ್ಸ್ ಹಂತ ಪ್ರವೇಶಿಸಿದೆ
ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಜಯ ದಾಖಲಿಸಿದ ಭಾರತ ಈ ಸಾಧನೆ ಮಾಡಿದೆ. ನಿಗದಿತ ಅವಧಿಯಲ್ಲಿ ಪಂದ್ಯ ಮುಗಿದಾಗ ಎರಡೂ ತಂಡಗಳು ತಲಾ ,ಊರು ಗೋಲುಗಳನ್ನು ದಾಖಲಿಸಿದ್ದವು. ಆ ನಂತರ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ 3–2ರಿಂದ ಜಯ ಸಾಧಿಸಿದೆ.
ಗುರ್ಜಂತ್ ಸಿಂಗ್ (31ನೇ ನಿಮಿಷ), ಹರ್ಮನ್ ಪ್ರೀತ್ ಸಿಂಗ್ (35ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್ (46ನೇ ನಿಮಿಷ) ಭಾರತದ ಪರವಾಗಿ ಗೋಲು ದಾಖಲಿಸಿದರು. ಇದಾಗಿ ಪೆನಾಲ್ಟು ಶೂಟೌಟ್ ವೇಳೆ ಭಾರತದ ಪರ ಲಲಿತ್ ಉಪಾಧ್ಯೆ ಮತ್ತು ರೂಪಿಂದರ್ ಪಾಲ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಚೆಂಡನ್ನು ಗುರಿ ಸೇರಿಸಿದ್ದರು.
ಸರಣಿಯ ಇನ್ನೊಂದು ಭಾಗವಾಗಿ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಆಸ್ಟ್ರೇಲಿಯಾ 4–1ರಿಂದ ಗೆದ್ದಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos