ಪಿ.ವಿ. ಸಿಂಧು 
ಕ್ರೀಡೆ

ದುಬೈ ವಿಶ್ವ ಸೂಪರ್‌ ಸೀರಿಸ್‌: ಯಮಗುಚಿಯನ್ನು ಮಣಿಸಿದ ಸಿಂಧು, ಶ್ರೀಕಾಂತ್ ಗೆ ಸೋಲು

ದುಬೈ ವಿಶ್ವ ಸೂಪರ್‌ ಸೀರಿಸ್‌ ಫೈನಲ್‌ ಬ್ಯಾಡ್ಮಿಂಟನ್‌ ನಲ್ಲಿ ಭಾರತದ ಪಿ.ವಿ.ಸಿಂಧು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ದುಬೈ: ದುಬೈ ವಿಶ್ವ ಸೂಪರ್‌ ಸೀರಿಸ್‌ ಫೈನಲ್‌ ಬ್ಯಾಡ್ಮಿಂಟನ್‌ ನಲ್ಲಿ ಭಾರತದ ಪಿ.ವಿ.ಸಿಂಧು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 21–9, 21–13 ಸೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ.
ಇದಾಗಲೇ ಸೆಮಿ ಫೈನಲ್ಸ್ ಪ್ರವೇಶಿಸಿರುವ ಸಿಂಧು ತಮ್ಮ ‘ಎ’ ಗುಂಪಿನ ಕಡೆಯ ಹೋರಾಟದಲ್ಲಿ ಜಪಾನ್ ನ ಆಟಗಾರ್ತಿಯನ್ನು ಪರಾಭವಗೊಳಿಸಿದ್ದಾರೆ.
ದುಬೈನ ಶೇಖ್‌ ಹಮ್‌ದಾನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ವರ್ಷ ಎರಡು ಸೂಪರ್‌ ಸೀರಿಸ್‌ ಪ್ರಶಸ್ತಿ ಜಯಿಸಿದ್ದ ಸಿಂಧು ಈ ಜಯದೊಡನೆ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಸಿಂಧು ಚೀನಾದ ಚೆನ್‌ ಯುಫಿ ವಿರುದ್ಧ ಸೆಣೆಸಲಿದ್ದಾರೆ.
ನಿನ್ನೆ ನಡೆದ ಇನ್ನೊಂದು ಪಂದ್ಯದಲ್ಲಿ ಯುಫಿ 21–18, 13–21, 21–18 ಸೆಟ್ ಗಳ ಅಂತರದಲ್ಲಿ  ಥಾಯ್ಲೆಂಡ್‌ನ ರಚನೊಕ್‌ ಇಂಟಾನೊನ್‌ ಅವರನ್ನು ಮಣಿಸಿದ್ದಾರೆ. ಇದೇ ವೇಳೆ ಭಾರತದ ಇನ್ನೋರ್ವ ಭರವಸೆಯ ಆಟಗಾರ ಕಿಡಂಬಿ ಶ್ರೀಕಾಂತ್ ಚೀನಾದ ಶಿ ಯುಕಿ ವಿರುದ್ಧ 17-21, 21-19, 14-21 ಸೆಟ್ ಗಳ ಅಂತರದಲ್ಲಿ ಪರಾಭವವ ಗೊಂಡು ಸರಣಿಯಿಂದ ಹೊರನಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!