ಕ್ರೀಡೆ

ವಿಶ್ವನಾಥನ್ ಆನಂದ್ ಮುಡಿಗೆ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ ಕಿರೀಟ

Raghavendra Adiga
ರಿಯಾದ್ (ಸೌದಿ ಅರೇಜಿಯಾ): ಭಾರತದ ಹೆಮ್ಮೆಯ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಮತ್ತೆ ಅಗ್ರ ಪಟ್ಟಕ್ಕೇರಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಚೆಸ್ ನ ಕಿಂಗ್ ತಾನೆಂದು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ.
ಅಂತಿಮ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮಣಿಸಿದ ಆನಂದ್ ಬಹುದಿನಗಳ ನಂತರ ಮತ್ತೆ ಗೆಲುವಿನ ಹಾದಿಗೆ ಮರಳಿದ್ದಾರೆ. 
"ರ‍್ಯಾಪಿಡ್ ಚೆಸ್‌ನಲ್ಲಿ ಪಾರಮ್ಯ ಸಾಧಿಸಿರುವ ಕಾರ್ಲ್‌ಸನ್ ವಿರುದ್ಧ ಜಯ ಸಾಧಿಸಿರುವುದು ಸಂತಸ ತಂದಿದೆ. ಈ ಗೆಲುವು ನಿರ್ಣಾಯಕವಾದದ್ದು. ಕಠಿಣ ವರ್ಷದ ಬಳಿಕ ನಾನು ಈ ಪಂದ್ಯಾವಳಿಗೆ ಆಗಮಿಸಿದ್ದು ಲಂದನ್ ನ ಅನುಭವ ನನಗೆ ನಿರಾಶೆ ಉಂಟುಮಾಡಿತ್ತು. ಹಾಗಾಗಿ ಬಹುತೇಕ ಯಾವ ಆಶಾಭಾವನೆಗಳನ್ನಿರಿಸಿಕೊಂಡಿರಲಿಲ್ಲ.ಆದರೆ ಮತ್ತೆ ಜಯಗಳಿಅಸಿ ವಿಶ್ವ ಚಾಂಪಿಯನ್ ಆಗಿರುವುದು ನಿಜಕ್ಕೂ ಸಂತಸ, ಇದನ್ನು ಮಾತಿನಲ್ಲಝೇಳಲು ಸಾದ್ಯವಿಲ್ಲ" ಆನಂದ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ 2013ನೇ ಸಾಲಿನಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಕಾರ್ಲ್‌ಸನ್ ವಿರುದ್ಧ ಸೋಲನುಭವಿಸಿದ್ದ ಆನಂದ್ ಇಂದಿನ ಜಯದೊಡನೆ ಸೇಡು ತೀರಿಸಿಕೊಂಡಿದ್ದಾರೆ.
SCROLL FOR NEXT