ರಿಯಲ್ ಫೈಟ್: ಕುಸ್ತಿಪಟು ಸುಶೀಲ್ ಕುಮಾರ್, ಬೆಂಬಲಿಗರ ವಿರುದ್ಧ ಕೇಸ್ ದಾಖಲು
ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಪ್ರವೀಣ್ ರಾಣಾ ಬೆಂಬಲಿಗರು ನಿನ್ನೆ ರಿಯಲ್ ಆಗಿ ಹೊಡೆದಾಡಿಕೊಂಡಿರುವ ಘಟನೆಗೆ....
ನವದೆಹಲಿ: ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಮತ್ತು ಪ್ರವೀಣ್ ರಾಣಾ ಬೆಂಬಲಿಗರು ನಿನ್ನೆ ರಿಯಲ್ ಆಗಿ ಹೊಡೆದಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಲಿಪಿಂಕ್ ಪದವ ವಿಜೇತ್ ಸುಶೀಲ್ ಕುಮಾರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಶನಿವಾರ ಕೇಸ್ ದಾಖಲಿಸಿದ್ದಾರೆ.
ಸುಶೀಲ್ ಕುಮಾರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷೆನ್ 323 ಹಾಗೂ 341ರಡಿ ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದು ದೆಹಲಿ ಕೇಂದ್ರ ಉಪ ಪೊಲೀಸ್ ಆಯುಕ್ತ ಎಂಎಸ್ ರಂಧವ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಕಾಮನ್ ವೆಲ್ತ್ ಅರ್ಹತಾ ಪಂದ್ಯದಲ್ಲಿ ಸುಶೀಲ್ ಕುಮಾರ್ ವಿಜೇತರಾದ ನಂತರ ಇಬ್ಬರು ಕುಸ್ತಿ ಪಟುಗಳ ಬೆಂಬಲಗರ ನಡುವೆ ಹೊಡೆದಾಟ ನಡೆದಿತ್ತು.
ಈ ವೇಳೆ ಪ್ರವೀಣ್ ಕುಮಾರ್ ಅಣ್ಣ, ಬೆಂಬಲಿಗರು ಮತ್ತು ಸುಶೀಲ್ ಕುಮಾರ್ ಬೆಂಬಲಿಗರ ನಡುವೆ ಕಾದಾಟ ಸಂಭವಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.