ನವದೆಹಲಿ: ವಿಯೆಟ್ನಾಂನಲ್ಲಿ ಫೆಬ್ರವರಿ 14ರಿಂದ ಆರಂಭಗೊಳ್ಳಲಿರುವ ಏಷ್ಯಾ ಮಿಶ್ರ ತಂಡ ಚಾಂಪಿಯನ್ಶಿಪ್ನ ಭಾರತ ತಂಡದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿತಾರೆ ಪಿವಿ ಸಿಂಧು, ಲಂಡನ್ ಗೇಮ್ಸ್ ನ ರಜತ ಪದಕ ಗೆದ್ದ ಸೈನಾ ನೆಹ್ವಾಲ್ ಸ್ಥಾನಪಡೆದಿದ್ದಾರೆ.
ಕಳೆದ ವಾರ ಲಖನೌನಲ್ಲಿ ನಡೆದ ಸೈಯದ್ ಮೋದಿ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿ ಗೆದ್ದ ಸಿಂಧು, ಮಲೇಷ್ಯಾ ಮಾಸ್ಟರ್ಸ್ ನಲ್ಲಿ ಪದಕ ಗೆದ್ದ ಸೈನಾ ಇಬ್ಬುರ ಮಹಿಳಾ ಸಿಂಗಲ್ಸ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಚಾಂಪಿಯನ್ಶಿಪ್ ನಲ್ಲಿ ಒಂದು ಮಹಿಳಾ ಸಿಂಗಲ್ಸ್ ಪಂದ್ಯ, ಒಂದು ಪುರುಷ ಸಿಂಗಲ್ಸ್ ಪಂದ್ಯ, ಒಂದು ಪುರುಷ ಡಬಲ್ಸ್, ಒಂದು ಮಹಿಳಾ ಡಬಲ್ಸ್ ಪಂದ್ಯ ಮತ್ತು ಒಂದು ಮಿಶ್ರ ಡಬಲ್ಸ್ ಪಂದ್ಯವಿರುವುದರಿಂದ ಭಾರತದ ತಾನ್ವಿ ಲಾಡ್ ಮತ್ತು ರಿತುಪರ್ಣ ದಾಸ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.