ಮುಂಬೈ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ದಿಗ್ವಿಜಯ ಬಳಿಕ ಭಾರತ ಕಿರಿಯರ ತಂಡ ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಕಿರಿಯರು 9 ವಿಕೆಟ್ ನಷ್ಟಕ್ಕೆ 382 ರನ್ ಗಳ ಬೃಹತ್ ಮೊತ್ತ ಕಲೆಹಾಕಿದರು. 383 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ 152 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ 230 ರನ್ ಗಳಿಂದ ಭಾರೀ ಜಯ ಗಳಿಸಿತು.
ಭಾರತ ಪರ ಶುಭ್ಮನ್ ಗಿಲ್ 160 ರನ್ ಮತ್ತು ಪೃಥ್ವಿ ಶಾ ಸಿಡಿಸಿದ 105 ರನ್ ಗಳ ನೆರವಿನಿಂದ ಭಾರತ 382 ರನ್ ಬಾರಿಸಲು ಸಾಧ್ಯವಾಯಿತು. ಇಂಗ್ಲೆಂಡ್ ಕಿರಿಯರು ಪರ ಪೋಪ್ 59, ಜಾಕ್ಸ್ 44 ರನ್ ಗಳಿಗೆ ಔಟ್ ಆದರು.
ಸರಣಿಯ ಕೊನೆಯ ಪಂದ್ಯ ಔಪಚಾರಿಕ ಪಂದ್ಯವಾಗಿದ್ದು ಫೆಬ್ರವರಿ 8 ರಂದು ಮುಂಬೈನಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics