ನ್ಯೂಯಾರ್ಕ್: ಬೆಲಾರಸ್ ನ ಮಾಜಿ ಸ್ಟಾರ್ ಜಿಮ್ನಾಸ್ಟ್ ಓಲ್ಗಾ ಕೋರ್ಬಟ್ ತಮ್ಮ ವೃತ್ತಿಜೀವನದ ಅಮೂಲ್ಯ ಒಲಿಂಪಿಕ್ಸ್ ಪದಕಗಳನ್ನು ಮಾರಾಟ ಮಾಡಿದ್ದಾರೆ.
ಆರ್ಥಿಕ ಸಂಕಷ್ಟದಿಂದಾಗಿ ಒಂದೊತ್ತು ಉಟಕ್ಕೂ ಗತಿ ಇಲ್ಲದೆ ಪರದಾಡುತ್ತಿದ್ದ ಓಲ್ಗಾ ಸುಮಾರು 2.22 ಕೋಟಿ ರುಪಾಯಿ (3.33 ಲಕ್ಷ ಡಾಲರ್)ಗೆ ಮಾರಾಟ ಮಾಡಿದ್ದಾರೆ. 1972ರ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಗೆದ್ದಿದ್ದ 2 ಸ್ವರ್ಣ ಸಹಿತ ಇತರ ಕೆಲ ಪದಕ ಮತ್ತು ಟ್ರೋಫಿಗಳನ್ನು 61 ವರ್ಷದ ಕೋರ್ಬಟ್ ಮಾರಾಟ ಮಾಡಿದ್ದಾರೆ.
ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ತಂಡ ಸ್ಪರ್ಧೆಯಲ್ಲಿ ಅವರು ಸ್ವರ್ಣ ಪದಕ ಗೆದ್ದಿದ್ದರು. ಇದೇ ಒಲಿಂಪಿಕ್ಸ್ ನಲ್ಲಿ ಮತ್ತೆರಡು ವೈಯಕ್ತಿ ಸ್ವರ್ಣ ಪದಕಗಳನ್ನು ಓಲ್ಗಾ ಗೆದ್ದಿದ್ದರು. ನಂತರ 1976ರ ಮಾಂಟ್ರಿಯಲ್ ಒಲಿಂಪಿಕ್ಸ್ ನಲ್ಲೂ ತಲಾ 1 ಸ್ವರ್ಣ ಮತ್ತು ರಜತ ಪದಕ ಗೆದ್ದಿದ್ದರು.