ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

2018ರ ಹಾಕಿ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ: ರಘುನಾಥ್

2018ರ ಹಾಕಿ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಭಾರತ ಹಾಕಿ ತಂಡದ ಆಟಗಾರ ಆರ್.ವಿ ರಘುನಾಥ ಹೇಳಿದ್ದಾರೆ...

ರಘುನಾಥ್
Vishwanath S
Updated On : 8 Jan 2017, 5:30 am

ರಾಯಚೂರು: 2018ರ ಹಾಕಿ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಭಾರತ ಹಾಕಿ ತಂಡದ ಆಟಗಾರ ಆರ್.ವಿ ರಘುನಾಥ ಹೇಳಿದ್ದಾರೆ.

ಎರಡು ದಿನಗಳ ಕಾಲ ರಾಯಚೂರಿನಲ್ಲಿ ಅಂತಾರಾಜ್ಯ ರಿಂಕ್ ಹಾಕಿ ಕ್ರೀಡೆಯ ನಡೆಯುತ್ತಿದ್ದು ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ರಘುನಾಥ್ ಅವರು ಭಾರತ ಹಾಕಿ ತಂಡ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು 2018ರ ಹಾಕಿ ವಿಶ್ವಕಪ್ ಗೆಲ್ಲುವ ಭರವಸೆ ಇದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಭಾರತದ ಹಾಕಿ ತಂಡಕ್ಕೆ ಸ್ಕಿಲ್ ಇಲ್ಲವೆಂದು ಜರ್ಮನಿ ಹಾಕಿ ತಂಡದ ಕೋಚ್ ಹೇಳಿದ್ದು ಇದು ಸರಿಯಲ್ಲ. ಯಾಕೆಂದರೆ ವಿಶ್ವ ಯಾರ್ಕಿಂಗ್ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಹೀಗಿರುವಾಗ ಸ್ಕಿಲ್ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement