ಬ್ರಿಸ್ಬೇನ್ ಡಬಲ್ಸ್ ಚಾಂಪಿಯನ್ ಆದರೂ ನಂ.1 ಪಟ್ಟ ಬಿಟ್ಟ ಸಾನಿಯಾ ಮಿರ್ಜಾ
ವಿಶ್ವ ಡಬಲ್ಸ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಜತೆಗಾರ್ತಿ ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಜತೆ ಸೇರಿ...
ಬ್ರಿಸ್ಬೇನ್: ವಿಶ್ವ ಡಬಲ್ಸ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಜತೆಗಾರ್ತಿ ಅಮೆರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಜತೆ ಸೇರಿ ಬ್ರಿಸ್ಬೇನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆದರೆ ಇನ್ನು ಕಹಿಯ ವಿಚಾರ ಎಂದರೆ ಡಬಲ್ಸ್ ನಲ್ಲಿ ವಿಶ್ವ ನಂಬರ್ 1 ಆಗಿದ್ದ ಸಾನಿಯಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸತತ 91 ವಾರಗಳ ಬಳಿಕ ಸಾನಿಯಾ ಮಿರ್ಜಾ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಅಗ್ರ ಶ್ರೇಯಾಂಕಿತ ಸಾನಿಯಾ-ಬೆಥನಿ ಜೋಡಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ ಎಕಟರೀನಾ ಮಕರೋವಾ-ಎಲೆನಾ ವೆಸ್ನಿನಾ ಜೋಡಿಯನ್ನು 6-2, 6-3 ನೇರಸೆಟ್ ಗಳಿಂದ ಪರಾಭವಗೊಳಿಸಿತು.