ಕ್ರೀಡೆ

ರಾಜ್ಯ ಕ್ರೀಡಾ ಸಚಿವ ಮಧ್ವರಾಜ್‌ಗಾಗಿ 1 ಗಂಟೆ ಕಾದು ಕುಳಿತ ಕೇಂದ್ರ ಕ್ರೀಡಾ ಸಚಿವರು

Vishwanath S

ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗಾಗಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಸುಮಾರು 1 ಗಂಟೆ ಕಾಲ ಕಾದು ಕುಳಿತ ಘಟನೆ ನಡೆದಿದೆ.

ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ ಆವರಣದಲ್ಲಿ 11 ಸುಮಾರಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಬೇಕಿತ್ತು. ಇದಕ್ಕಾಗಿ ಕೇಂದ್ರ ಸಚಿವರಾದ ವಿಜಯ್ ಗೋಯೆಲ್ ಅವರು ಹೆಲಿಕಾಫ್ಟರ್ ಮೂಲಕ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಾದರು.

ಆದರೆ ಪ್ರಮೋದ್ ಮಧ್ವರಾಜ್ 12 ಗಂಟೆ ಸುಮಾರಿಗೆ ಆವರಣಕ್ಕೆ ಆಗಮಿಸಿದ್ದು ಅಲ್ಲಿಯವರೆಗೂ ವಿಜಯ್ ಗೋಯೆಲ್ ಕಾದು ಕುಳಿತಿದ್ದರು.

SCROLL FOR NEXT