ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ಲೋರ್‍ಬಾಲ್ ನಲ್ಲಿ 2 ಸ್ವರ್ಣ ಗೆದ್ದ ಕರ್ನಾಟಕ

11ನೇ ರಾಷ್ಟ್ರೀಯ ಪ್ಲೋರ್ ಬಾಲ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ಎರಡು ಸ್ವರ್ಣ, 1 ಬೆಳ್ಳಿ ಮತ್ತು 2 ಕಂಚಿನ ಪದಕ ಜಯಿಸಿದೆ...

ಕರ್ನಾಟಕ
Vishwanath S
Updated On : 13 Jan 2017, 11:40 am

ಬೆಂಗಳೂರು: 11ನೇ ರಾಷ್ಟ್ರೀಯ ಪ್ಲೋರ್ ಬಾಲ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ಎರಡು ಸ್ವರ್ಣ, 1 ಬೆಳ್ಳಿ ಮತ್ತು 2 ಕಂಚಿನ ಪದಕ ಜಯಿಸಿದೆ.

ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿ ಇತ್ತೀಚೆಗೆ ನಡೆದ ಟೂರ್ನಿಯ ಪುರುಷರ ಮುಕ್ತ ವಿಭಾಗದಲ್ಲಿ ರಾಜ್ಯ ತಂಡ 4-2ರಿಂದ ಜಾರ್ಖಂಡ್ ತಂಡವನ್ನು ಮಣಿಸಿ ಸ್ವರ್ಣ ಪದಕ ಗೆದ್ದಿತು. ಇನ್ನು 14 ವಯೋಮಿತಿಯ ಬಾಲಕರ ತಂಡ ತಮಿಳುನಾಡು ವಿರುದ್ಧದ 2-1 ರಿಂದ ಗೆದ್ದು ಚಿನ್ನದ ಪದಕಕ್ಕೆ ಭಾಜನವಾಯಿತು.

19 ವಯೋಮಿತಿಯ ಬಾಲಕರ ತಂಡ ಫೈನಲ್ ನಲ್ಲಿ ದೆಹಲಿ ವಿರುದ್ಧದ 0-6ರಿಂದ ಸೋತು ಬೆಳ್ಳಿ ಪದಕಕ್ಕೆ ಕೊರಳೊಡ್ಡಿತು. ಇನ್ನುಳಿದಂತೆ 19 ಮತ್ತು 14 ವಯೋಮಿತಿಯ ಬಾಲಕಿಯರ ತಂಡ ಕ್ರಮವಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement