ಆಸ್ಟ್ರೇಲಿಯಾ: 6 ಬಾರಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ವಿಶ್ವದ ನಂ.2 ಶ್ರೇಯಾಂಕಿತ ನೊವಾಕ್ ಜಾಕೋವಿಕ್‌ರನ್ನು ವಿಶ್ವದ ನಂ.117 ಶ್ರೇಯಾಂಕಿತ ಡೇನಿಸ್ ಇಸ್ಟೋಮಿನ್ ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ.
13 ಬಾರಿ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸ್ಪರ್ಧಿಸಿರುವ ನೊವಾಕ್ ಜಾಕೋವಿಕ್ ಆರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಆದರೆ ಪ್ರಸ್ತುತ ಟೂರ್ನಿಯಲ್ಲಿ ಡೇನಿಸ್ ಇಸ್ಟೋಮಿನ್ ಜಾಕೋವಿಕ್‌ರನ್ನು 7-6, 5-7, 2-6, 7-6, 6-4 ನೇರ ಸೆಟ್ ಗಳಿಂದ ಮಣಿಸಿ ಟೆನಿಸ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದಾರೆ.