ಬೆಂಗಳೂರು: ಫಾರ್ಮುಲ ಸೌಥ್ ಈಸ್ಟ್ ಏಷಿಯಾ ಚಾಂಪಿಯನ್‍ಶಿಪ್ 2016 ರಲ್ಲಿ ಬೆಂಗಳೂರು ಯುವಕ ಆಕಾಶ್‍ಗೌಡ ಚೊಚ್ಚಲ ಚಾಂಪಿಯನ್‍ಶಿಪ್ ಗೆದ್ದುಕೊಂಡಿದ್ದಾರೆ.
ಚಾಂಪಿಯನ್‍ಶಿಪ್ ಆರು ಸುತ್ತಿನದ್ದಾಗಿದ್ದು, ಪ್ರತಿ ಸುತ್ತಿನಲ್ಲಿ ಆರು ಸ್ಪರ್ಧೆ ಇತ್ತು. ಋತುವಿನಲ್ಲಿ 36 ಸ್ಪರ್ಧೆಗಳು. ಸೌಥ್ ಈಸ್ಟ್ ಏಷಿಯಾದ ಇತರ ಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಮೊದಲ ಸುತ್ತಿನ ಸ್ಪರ್ಧೆ 2016. ಆಗಸ್ಟ್ 5-7 ರವರೆಗೆ ಸೆಪಂಗ್ ಅಂತರರಾಷ್ಟ್ರೀಯ ಸಕ್ರ್ಯೂಟ್‍ನಲ್ಲಿ. ತಾಂತ್ರಿಕ ಸಮಸ್ಯೆಯಿಂದಾಗಿ ಆಕಾಶ್ ಮೊದಲ ಸುತ್ತಿನಲ್ಲೇ ನಿವೃತ್ತರಾದರು. ಮೂರನೇ ಸ್ಪರ್ಧೆಯಲ್ಲಿ ಗೆಲುವಿನ ಮೊದಲ ಸವಿ ಕಂಡರು. ಅವರು ಗಳಿಸಿದ್ದು, ಮೂರನೇ ಸ್ಥಾನ. ಇದು ಮುಂದಿನ ಸುತ್ತಿನಲ್ಲಿ ಭಾರತೀಯ ಸ್ಪರ್ಧೆಯಲ್ಲಿ ಸೆಣಸಲು ಉತ್ತೇಜನ ನೀಡಿತ್ತು.
ಎರಡನೇ 2016, ಅಕ್ಟೋಬರ್ 15-16 ಫಿಲಿಪೈನ್ಸ್‍ನ ಕ್ಲಾರ್ಕ್ ಅಂತರರಾಷ್ಟ್ರೀಯ ಸ್ಪೀಡ್‍ವೇನಲ್ಲಿ ನಡೆಯಿತು. ಮೊದಲ ಹಾಗೂ ಎರಡನೇ ಸ್ಪರ್ಧೆಯಲ್ಲಿ ಆಕಾಶ್ ಜಯಿಸಿದರು. ಮೂರನೇಯದರಲ್ಲಿ ನಿವೃತರಾದರು. ನಾಲ್ಕನೇಯದರಲ್ಲಿ ಎರಡನೇಯವರಾದರು. ಎರಡನೇ ಸುತ್ತಿನಲ್ಲಿ ತೋರಿದ ಪ್ರಾಬಲ್ಯ ಚಾಂಪಿಯನ್‍ಶಿಪ್‍ನಲ್ಲಿ ಮುನ್ನಡೆ ಸಾಧಿಸಲು ನೆರವಾಯಿತು. ಈ ಸುತ್ತಿನಲ್ಲಿ ಆಕಾಶ್ “ಪೆಟ್ರನ್ ಸ್ಟಾರ್ ಡ್ರೈವರ್” ಗೌರವ ಸಹ ಸಂಪಾದಿಸಿದರು.
ಮೂರನೇ ಸುತ್ತು 2016, ನವೆಂಬರ್ 11-13 ರವರೆಗೆ ಇಂಡೋನೇಷಿಯಾದ ಸೆಂತಲ್ ಅಂತರರಾಷ್ಟ್ರೀಯ ಸೆಕ್ಯೂರ್ಟ್‍ನಲ್ಲಿ ನಡೆಯಿತು. ಎರಡನೇ ಸ್ಪರ್ಧೆಯಲ್ಲಿ ಗೆದ್ದ ಆಕಾಶ್, 4 ಹಾಗೂ 5ನೇ ಸ್ಪರ್ಧೆಯಲ್ಲಿ 3ನೇ ಸ್ಥಾನ ಗಳಿಸುವ ಜೊತೆಗೆ “ಪೆಟ್ರನ್ ಸ್ಟಾರ್ ಡ್ರೈವರ್” ಪ್ರಶಸ್ತಿ ಮತ್ತೊಮ್ಮೆ ಗೆದ್ದುಕೊಂಡರು.
2016, ಡಿಸೆಂಬರ್ 8-10 ರವರೆಗೆ ಸೆಪಾಂಗ್‍ನಲ್ಲಿ ನಡೆದ ನಾಲ್ಕನೇ ಸುತ್ತಿನ ವೇಳೆಗೆ ಆಕಾಶ್ ಉತ್ತಮ ಪಾಯಿಂಟ್ಸ್ ಸಂಪಾದಿಸಿದ್ದರು. ಇಲ್ಲಿ ಭಾರತದ ಸ್ಪರ್ಧಿ ಎರಡನೇ ಸ್ಪರ್ಧೆಯಲ್ಲಿ ಮೂರನೇ, ಮೂರನೇ ಸ್ಪರ್ಧೆಯಲ್ಲಿ ಎರಡನೇ, ಹಾಗೂ ಆರನೇ ಸ್ಪರ್ಧೆಯಲ್ಲಿ ಮೂರನೆಯವರಾದರು.
ಐದನೇ ಸುತ್ತು 2017 ಜನವರಿ 6-8 ಥೈಲೆಂಡ್‍ನ ಚಾಂಗ್ ಇಂಟರ್‍ನ್ಯಾಷನಲ್ ಸೆಕ್ಯೂರ್ಟ್‍ನಲ್ಲಿ ನಡೆಯಿತು. ಅನೇಕ ತಾಂತ್ರಿಕ ಸವಾಲು ಎದುರಿಸಿದ ಆಕಾಶ್ ಐದು ಮತ್ತು ಆರನೇ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ರೋಚಕ ಅಂತಿಮ ಆರನೇ ಸುತ್ತಿನ ಸ್ಪರ್ಧೆ 2017 ಜನವರಿ 21-22 ರಂದು ಕೌಲಾಲಂಪುರದ ಸೆಪಾಂಗ್ ಅಂತರರಾಷ್ಟ್ರೀಯ ಸೆಕ್ಯೂರ್ಟ್‍ನಲ್ಲಿ ನಡೆಯಿತು. ಹೆಚ್ಚಿನ ಚಾಲಕರಿಗೆ ಇದು ಮಾಡು ಇಲ್ಲವೆ ಮಡಿ ಸ್ಪರ್ಧೆಯಾಗಿತ್ತು. ಸ್ಪರ್ಧೆಯಿಂದ ಸ್ಪರ್ಧೆಗೆ ತಾಂತ್ರಿಕ ಸಮಸ್ಯೆ ಎದುರಿಸಿದರೂ, ತಾಳ್ಮೆಯಿಂದ ಇದ್ದ ಆಕಾಶ್, ಅಂತಿಮವಾಗಿ ಏಳು ಸೆಕೆಂಡ್ ಮುನ್ನಡೆಯೊಂದಿಗೆ ಸ್ಪರ್ಧೆಯಲ್ಲಿ ವಿಜಯಿಯಾದರು. ಒಟ್ಟು 457 ಪಾಯಿಂಟ್ ಸಂಪಾದಿಸಿದ ಆಕಾಶ್, ಚಾಂಪಿಯನ್‍ಶಿಪ್‍ನಲ್ಲಿ ಎರಡನೇ ರನ್ನರ್‍ಅಪ್ ಆದರು.
ಚಾಂಪಿಯನ್‍ಶಿಪ್‍ನಲ್ಲಿ ಎರಡನೇ ರನ್ನರ್‍ಅಪ್ ಆಗುವ ಹಾದಿಯಲ್ಲಿ ಅವರು 14 ಬಾರಿ ವೇದಿಕೆ ಏರಿದ್ದರು.
ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗೆದ್ದಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಮಾರ್ಗದರ್ಶನ ನೀಡಿದ ರೂವಾರಿ ಅರ್ಮಾನ್ ಇಬ್ರಾಹಿಂ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ಆಕಾಶ್ ತಿಳಿಸಿದ್ದಾರೆ.