ಆಸ್ಟ್ರೇಲಿಯಾ ಓಪನ್: ಸಹೋದರಿ ವಿರುದ್ಧ ಗೆದ್ದ ಸೆರೆನಾ ವಿಲಿಯಮ್ಸ್; ದಾಖಲೆಯ 23ನೇ ಗೆಲುವು
ಅಮೆರಿಕದ ಸೆರೆನಾ ವಿಲಿಯಮ್ಸ್ ಶನಿವಾರ ಸಹೋದರಿ ವೀನಸ್ ವಿಲಿಯಮ್ಸ್ ವಿರುದ್ಧ ಗೆಲ್ಲುವ ಮೂಲಕ ದಾಖಲೆಯ 23ನೇ...
ಮೆಲ್ಬೋರ್ನ್: ಅಮೆರಿಕದ ಸೆರೆನಾ ವಿಲಿಯಮ್ಸ್ ಶನಿವಾರ ಸಹೋದರಿ ವೀನಸ್ ವಿಲಿಯಮ್ಸ್ ವಿರುದ್ಧ ಗೆಲ್ಲುವ ಮೂಲಕ ದಾಖಲೆಯ 23ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸೆರೆನಾ ವಿಲಿಯಮ್ಸ್ ಇಂದು ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ತಮ್ಮ ಅಕ್ಕ ವೀನಸ್ ಅವರ ವಿರುದ್ಧ 6-4, 6-4 ಅಂಕಗಳಿಂದ ಗೆಲುವು ಸಾಧಿಸಿದರು.
35 ವರ್ಷದ ಸೆರೆನಾ ಅವರು 22 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಸ್ಟೆಫಿ ಗ್ರಾಫ್ ಅವರ ದಾಖಲೆಯನ್ನು ಈಗಾಗಲೇ ಸರಿಗಟ್ಟಿದ್ದಾರೆ. 23ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಸೆರೆನಾ ಕಳೆದ ವರ್ಷದ ಫೈನಲ್ನಲ್ಲಿ ಏಂಜಲಿಕಾ ಕೆರ್ಬರ್ ವಿರುದ್ಧ ಸೋತಿದ್ದರು. ಈ ಬಾರಿ ತಮ್ಮ ಸಹೋದರಿಯ ವಿರುದ್ಧ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಟೂರ್ನಿಯ ಆರಂಭದಿಂದಲೂ ಸಹೋದರಿಯರು ಪ್ರಶಸ್ತಿ ಸುತ್ತಿನಲ್ಲಿ ಹಣಾಹಣಿ ನಡೆಸುವ ನಿರೀಕ್ಷೆ ಇತ್ತು. ಡಬಲ್ಸ್ನಲ್ಲಿ ಜೊತೆಯಾಗಿ ಆಡುವ ಅಕ್ಕ–ತಂಗಿಯರು ಇಂದು ಎದುರಾಳಿಯಾಗಿ ಆಡುವ ಮೂಲಕ ಟೆನಿಸ್ ಪ್ರಿಯರನ್ನು ರಂಜಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.