ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಸಹೋದರಿ ವೀನಸ್ ನನ್ನು ಮಣಿಸಿದ ಸೆರೇನಾ ವಿಲಿಯಮ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
23ನೇ ಗ್ರಾಂಡ್ ಸ್ಲಾಂ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಸೆರೇನಾ ವಿಲಿಯಮ್ಸ್ ಜರ್ಮನಿ ದಿಗ್ಗಜೆ ಸ್ಪೆಫಿ ಗ್ರಾಫ್ ದಾಖಲೆಯನ್ನು ಮುರಿದಿದ್ದಾರೆ. ಜತೆಗೆ ಏಂಜೆಲಿಕ್ ಕೆರ್ಬರ್ ರನ್ನು ಹಿಂದಿಕ್ಕಿ ಮತ್ತೆ ವಿಶ್ವ ನಂ.1 ಸ್ಥಾನಕ್ಕೂ ಮರಳಿದ್ದಾರೆ.
ರಾಡ್ ಲೆವರ್ ಅರೇನಾದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ವೀನಸ್ ರನ್ನು 6-4, 6-4 ನೇರ ಸೆಟ್ ಗಳಿಂದ ಸೆರೇನಾ ಮಣಿಸಿದರು.