ಕ್ರೀಡೆ

ಹೆಚ್ ಎಸ್ ಪ್ರಣಯ್ ಮುಡಿಗೆ ಯುಎಸ್ ಗ್ರಾಂಡ್ ಪಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೈಟಲ್

Srinivas Rao BV
ನವದೆಹಲಿ: ಪರುಪಳ್ಳಿ ಕಶ್ಯಪ್ ಅವರನ್ನು ಮಣಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಹೆಚ್ಎಸ್ ಪ್ರಣಯ್ ಯುಎಸ್ ಗ್ರಾಂಡ್ ಪಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೈಟಲ್ ನ್ನು ಮುಡಿಗೇರಿಸಿಕೊಂಡಿದ್ದಾರೆ. 
ಕ್ಯಾಲಿಫೋರ್ನಿಯಾದ ಅನಹೀಮ್ ನಲ್ಲಿ ಅಮೆರಿಕ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 21-15, 20-22, 21-12 ಸೆಟ್ ಗಳ ಅಂತರದಿಂದ ಎದುರಾಳಿ ಆಟಗಾರ ಪರುಪಳ್ಳಿ ಕಶ್ಯಪ್ ಅವರನ್ನು ಮಣಿಸಿದ್ದಾರೆ. 
ಗಾಯದ ಸಮಸ್ಯೆಯಿಂದ ಗುಣಮುಖರಾಗಿ ವಾಪಸಾದ ಕಶ್ಯಪ್‌ 21 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದರು, ಪ್ರಣಯ್ ಕೂಡ ಗಾಯದ ಸಮಸ್ಯೆಗಳಿಂದ ಹೊರಬಂದು ಅಮೆರಿಕ ಓಪನ್‌ನ ಪ್ರಶಸ್ತಿಯ ಫೈನಲ್ ಪಂದ್ಯವನ್ನಾಡಿದ್ದರು. 
ಭಾರತದ ಇಬ್ಬರು ಫೈನಲ್ ನಲ್ಲಿ ಸೆಣೆಸಿರುವ ಎರಡನೇ ಟೂರ್ನಿ ಇದಾಗಿದ್ದು, ಏಪ್ರಿಲ್‌ನಲ್ಲಿ ನಡೆದ ಸಿಂಗಪುರ ಓಪನ್‌ನಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಬಿ.ಸಾಯಿಪ್ರಣೀತ್‌ ಫೈನಲ್‌ ತಲುಪಿದ್ದರು.   ಪ್ರಣೀತ್‌ ಜಯ ಸಾಧಿಸಿದ ಸೂಪರ್ ಸರಣಿಯ ಚೊಚ್ಚಲ ಪ್ರಶಸ್ತಿ ಪಡೆದಿದ್ದರು.
SCROLL FOR NEXT