ಜ್ವಾಲಾ ಗುಟ್ಟಾ 
ಕ್ರೀಡೆ

'ನಿಮ್ಮ ತಾಯಿ ಚೀನೀ', 'ಮೋದಿ ವಿರೋಧಿ' ಎಂದ ಟ್ವೀಟಿಗನ ವಿರುದ್ಧ ಜ್ವಾಲಾ ಗುಟ್ಟಾ ಆಕ್ರೋಶ

ನಿಮ್ಮ ತಾಯಿ ಏಲಾನ್ ಗುಟ್ಟಾ ಓರ್ವ ಚೀನೀ ಮಹಿಳೆ. ಹೀಗಾಗಿ ನೀವು ಪ್ರಧಾನಿ ಮೋದಿ ವಿರೋಧಿ ಎಂದು ಅವಮಾನಕರ ರೀತಿಯಲ್ಲಿ ಟ್ವೀಟ್ ಮಾಡಿದ್ದ ಹಿಂಬಾಲಕನಿಗೆ...

ನವದೆಹಲಿ: ನಿಮ್ಮ ತಾಯಿ ಏಲಾನ್ ಗುಟ್ಟಾ ಓರ್ವ ಚೀನೀ ಮಹಿಳೆ. ಹೀಗಾಗಿ ನೀವು ಪ್ರಧಾನಿ ಮೋದಿ ವಿರೋಧಿ ಎಂದು ಅವಮಾನಕರ ರೀತಿಯಲ್ಲಿ ಟ್ವೀಟ್ ಮಾಡಿದ್ದ ಹಿಂಬಾಲಕನಿಗೆ ಬ್ಯಾಡ್ಮಿಂಟನ್ ಡಬಲ್ಸ್ ತಾರೆ ಜ್ವಾಲಾ ಗುಟ್ಟಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ನಿಮ್ಮ ತಾಯಿ ಮೋದಿ ವಿರೋಧಿ, ರಾಷ್ಟ್ರ ವಿರೋಧಿ, ಆಕೆ ಒಬ್ಬ ಚೀನೀ ಮಹಿಳೆ ಎಂದು ಟ್ವಿಟರ್ ಹಿಂಬಾಲಕನೋರ್ವ ಜ್ವಾಗಾ ಗುಟ್ಟಾಗೆ ಟ್ವೀಟ್ ಮಾಡಿದ್ದಾನೆ. ಇನ್ನು ನೀವು ಪ್ರತೀ ಬಾರಿ ಮೋದಿಯನ್ನು ವಿರೋಧಿಸುವುದು ನಿಮ್ಮ ತಾಯಿ ಚೀನದವರಾಗಿರುವ ಕಾರಣಕ್ಕೆ ಇರಬಹುದೇ? ಎಂದು ಟ್ವೀಟಿಸಿದ್ದು ಇದು ಜ್ವಾಲಾ ಗುಟ್ಟಾ ಅವರ ಕೋಪಕ್ಕೆ ಕಾರಣವಾಗಿದೆ. 
ಟ್ವೀಟರಿಗನ ಆರೋಪಗಳಿಗೆ ಉತ್ತರವಾಗಿ ಜ್ವಾಲಾ ಗುಟ್ಟಾ ಮಾತನಾಡುವ ಮೊದಲು ಎರಡು ಬಾರಿ ಯೋಚಿಸಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. 
ನಂತರ ಇಬ್ಬರ ನಡುವೆ ಸರಣಿ ಟ್ವೀಟ್ ಗಳ ಸಮರವೇ ನಡೆದಿದೆ. ಕೊನೆಗೆ ಕೋಪಗೊಂಡ ಜ್ವಾಲಾ ಗುಟ್ಟಾ ಹಿಂಬಾಲಕನನ್ನು ಬ್ಲಾಕ್ ಮಾಡಿದ್ದಾರೆ. 
ಬಳಿಕ ಜ್ವಾಲಾ ಗುಟ್ಟಾ ಅವರು ತಮ್ಮ ತಾಯಿ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel