ಮರಳಿನಲ್ಲಿ ಧ್ಯಾನ್ ಚಂದ್ ರಚಿಸಿದ ಕಲಾವಿದ ಸುದರ್ಶನ್ ಪಾಟ್ನಾಯಕ್
ನವದೆಹಲಿ: ಹಾಕಿ ದಂತಕಥೆ ಧ್ಯಾನ್ ಚಂದ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕೆಂದು ಕೇಂದ್ರ ಕ್ರೀಡಾ ಇಲಾಖೆ ಸಚಿವ ವಿಜಯ್ ಗೋಯಲ್ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ.
ಧ್ಯಾನ್ ಚಂದ್ ಅವರಿಂದಾಗಿ 1928, 1932 ಮತ್ತು 1936ರಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸುವಂತಾಯಿತು.
ಧ್ಯಾನ್ ಚಂದ್ ಅವರಿಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರಿಗಿಂತ ಮುನ್ನವೇ ಭಾರತರತ್ನ ಗೌರವ ನೀಡಬೇಕಾಗಿತ್ತು ಎಂದು ಹಲವು ವರ್ಷಗಳಿಂದ ಕ್ರೀಡಾಭಿಮಾನಿಗಳು ಒತ್ತಾಯಿಸುತ್ತಲೇ ಬಂದಿದ್ದಾರೆ.
ಕಳೆದ ವರ್ಷ ಮಾಜಿ ಹಾಕಿ ನಾಯಕ ಅಜಿತ್ ಪಾಲ್ ಸಿಂಗ್, ಝಫರ್ ಇಕ್ಬಾಲ್, ದಿಲೀಪ್ ಟಿರ್ಕಿ ಮತ್ತು ಧ್ಯಾನ್ ಚಂದ್ ಅವರ ಪುತ್ರ ಅಶೋಕ್ ಕುಮಾರ್ ದೆಹಲಿಯ ಜಂತರ್ ಮಂತರ್ ಮುಂದೆ ಧ್ಯಾನ್ ಚಂದ್ ಅವರಿಗೆ ಮರಣೋತ್ತರ ಭಾರತರತ್ನ ನೀಡಬೇಕೆಂದು ಬೇಡಿಕೆಯನ್ನಿಟ್ಟು ಪ್ರತಿಭಟನೆ ನಡೆಸಿದ್ದರು.