ಮೀರತ್: ಹಣದ ಆಸೆಗಾಗಿ ರಾಷ್ಟ್ರೀಯ ಅಥ್ಲೀಟ್ ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಪ್ರಕರಣ ಮೀರನ್ ನಲ್ಲಿ ದಾಖಲಾಗಿದೆ.
ಜಾವೆಲಿನ್ ಎಸೆತಗಾರ ಸೊಹನ್ವೀರ್ ಚೌಧರಿ 2011ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 28 ವರ್ಷದ ಸೊಹನ್ವೀರ್ ಪಿಎಸಿ ಕಂಪನಿಯ ನಿವೃತ್ತ ಕಮಾಂಡರ್ ಜಗ್ವೀರ್ ಚೌಧರಿ ಅವರ ಪುತ್ರನಾಗಿದ್ದು 7 ಯುವಕರ ಗ್ಯಾಂಗ್ ಜತೆ ಸೇರಿ 17 ವರ್ಷದ ಬಾಲಕನನ್ನು ಅಪಹರಿಸಿದ್ದು ಬರೋಬ್ಬರಿ 5 ಕೋಟಿಗೆ ಬೇಡಿಕೆ ಇಟ್ಟಿದ್ದರು.
ಜೂನ್ 23ರಂದು ಸೊಹನ್ವೀರ್ ತನ್ನ ಗ್ಯಾಂಗ್ ನೊಂದಿಗೆ ಸಣ್ಣ ಉದ್ಯಮಿಯೊಬ್ಬರ ಮಗ ನನ್ನು ಅಪರಹಣ ಮಾಡಿ ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಕಾರ್ಯಾಚರಣೆಗೆ ಇಳಿದ ಪೊಲೀಸರು 2 ದಿನಗಳ ನಂತರ ಗ್ರೇಟರ್ ನೋಯ್ಡಾದಲ್ಲಿ ಬಾಲಕನನ್ನು ರಕ್ಷಿಸಿ ಸೊಹನ್ವೀರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.