ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳಪೆ ಪಿಚ್ ನಿರ್ಮಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 10 ಲಕ್ಷ ದಂಡ ವಿಧಿಸುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಪುಣೆಯ ಪಿಚ್ ಅನ್ನು ಸ್ಪಿನ್ ಪಿಚ್ ಮಾಡುವಂತೆ ಸ್ಥಳೀಯ ಕ್ಯುರೇಟರ್ ಮೇಲೆ ಒತ್ತಡ ಹಾಕಿತ್ತು ಎಂದು ಸ್ವತಃ ಕ್ಯುರೇಟರ್ ಹೇಳಿರುವ ಕಾರಣ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ.
ಪಿಚ್ ವಿವಾದ ಕುರಿತಂತೆ ಐಸಿಸಿ ರೆಫ್ರಿ ಕ್ರಿಸ್ ಬ್ರಾಡ್ ಪುಣೆ ಪಿಚ್ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ವರದಿ ಮಾಡಿದ್ದರು. ಈ ಸಂಬಂಧ 14 ದಿನಗಳೊಳಗೆ ಉತ್ತರ ನೀಡುವಂತೆ ಬಿಸಿಸಿಐಗೆ ನೋಟಿಸ್ ಸಹ ನೀಡಿದ್ದರು.