ಅಮನ್ ಪ್ರೀತ್ ಸಿಂಗ್-ಜಿತು ರೈ
ನವದೆಹಲಿ: ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಟೂರ್ನಿಯಲ್ಲಿ 50 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಟಾರ್ ಶೂಟರ್ ಜಿತು ರೈ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಇದೇ ವಿಭಾಗದಲ್ಲಿ ಅಮನ್ ಪ್ರೀತ್ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಡಾ ಕಾರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಜಿತು ರೈ 230.1 ಅಂಕಗಳೊಂದಿಗೆ ಸ್ವರ್ಣ ಪದಕ ಜಯಿಸಿದ್ದಾರೆ. 226.9 ಅಂಕಗಳೊಂದಿಗೆ ಅಮನ್ ಪ್ರೀತ್ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಒಂದೇ ಶೂಟಿಂಗ್ ವಿಶ್ವಕಪ್ ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ಖ್ಯಾತಿಗೆ ಜಿತು ರೈ ಭಾಜನರಾಗಿದ್ದಾರೆ. ಮಂಗಳವಾರ ನಡೆದ 10 ಮಿ. ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ಕಂಚಿನ ಪದಕ ಗೆದ್ದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos