ಕ್ರೀಡೆ

ಭಾರತೀಯ ಸೇನೆಗೆ ಸೇರಿದ ವಿಶ್ವದಾಖಲೆ ವೀರ ನೀರಜ್ ಚೋಪ್ರಾ

Vishwanath S
ನವದೆಹಲಿ: ವಿಶ್ವದಾಖಲೆ ವೀರ ನೀರಜ್ ಚೋಪ್ರಾ ಭಾರತೀಯ ಸೇನೆಗೆ ಕಿರಿಯ ನಿಯೋಜಿತ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ. 
ಜೂನಿಯರ್ ವಿಭಾಗದ ಜಾವೆಲಿನ್ ಥ್ರೋನಲ್ಲಿ 19 ವರ್ಷದ ನೀರಜ್ ವಿಶ್ವದಾಖಲೆ ನಿರ್ಮಿಸಿದ್ದರು. ರೈತಾಪಿ ಕುಟುಂಬದ ನೀರಜ್ ಕುಟುಂಬಕ್ಕೆ ಈ ಉದ್ಯೋಗ ಆರ್ಥಿಕವಾಗಿ ಚೇತರಿಕೆ ನೀಡಲಿದೆ. 
ಪೋಲೆಂಡ್ ನಲ್ಲಿ ನಡೆದ 20 ವಯೋಮಿತಿ ಐಎಎಎಫ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ 86.48 ಮೀಟರ್ ಎಸೆಯುವ ಮೂಲಕ ನೀರಜ್ ಜೂನಿಯರ್ ಮಟ್ಟದಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದರು. 
SCROLL FOR NEXT