ಫುಟ್ ಬಾಲ್ ನೊಂದಿಗೆ ಸಂಸತ್ತಿಗೆ ಆಗಮಿಸಿದ ವಿಜಯ್ ಗೋಯಲ್ 
ಕ್ರೀಡೆ

ಫೀಫಾ-ಅಂಡರ್ 17 ವಿಶ್ವ ಕಪ್ ಪ್ರಚಾರಕ್ಕೆ ಫುಟ್ ಬಾಲ್ ನೊಂದಿಗೆ ಸಂಸತ್ತಿಗೆ ಬಂದ ಕ್ರೀಡಾ ಸಚಿವ!

ಫೀಪಾ ಅಂಡರ್ 17 ವಿಶ್ವಕಪ್ ನ್ನು ಪ್ರಚಾರ ಮಾಡಲು ಬಿಜೆಪಿ ಸಂಸದೀಯ ಸಭೆಗೆ...

ನವದೆಹಲಿ: ಫೀಪಾ ಅಂಡರ್ 17 ವಿಶ್ವಕಪ್ ನ್ನು ಪ್ರಚಾರ ಮಾಡಲು ಬಿಜೆಪಿ ಸಂಸದೀಯ ಸಭೆಗೆ ಕ್ರೀಡಾ ಸಚಿವ ವಿಜಯ್ ಗೋಯಲ್ ಫುಟ್ ಬಾಲ್ ಹಿಡಿದುಕೊಂಡು ಬಂದ ಪ್ರಸಂಗ ಇಂದು ನಡೆಯಿತು.
ಮುಂದಿನ ಅಕ್ಟೋಬರ್ 28ರಂದು ಫೀಫಾ ಅಂಡರ್ 17 ವಿಶ್ವಕಪ್ ನ ಕೊನೆಯ ಪಂದ್ಯ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಅಂಡರ್ 17 ಫೀಫಾ ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯಗಳು ನವಿ ಮುಂಬೈ ಹಾಗೂ ಗುವಾಹಟಿಯಲ್ಲಿ ನಡೆಯಲಿದೆ. ಪಂದ್ಯವನ್ನಾಡಲು ಭಾರತದಾದ್ಯಂತ 6 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಫೀಫಾ ಮತ್ತು ಸ್ಥಳೀಯ ಆಯೋಜಕ ಸಮಿತಿ ಪಂದ್ಯಗಳ ದಿನಾಂಕಗಳನ್ನು ಘೋಷಿಸಿದೆ.
ಅಕ್ಟೋಬರ್ 6ರಂದು ಮೊದಲ ಡಬಲ್ ಹೆಡರ್ ಪಂದ್ಯ ದೆಹಲಿ ಮತ್ತು ನವಿ ಮುಂಬೈಯಲ್ಲಿ ಆರಂಭವಾಗಿ ಉಳಿದ 4 ಕ್ವಾರ್ಟರ್ ಫೈನಲ್ ಪಂದ್ಯಗಳು ಗೋವಾ, ಗುವಾಹಟಿ, ಕೊಚ್ಚಿ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿವೆ.
ಪ್ರತಿ ಸ್ಥಳದಲ್ಲಿ 8 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಫೀಫಾ ಟೂರ್ನಮೆಂಟ್ ಮುಖ್ಯಸ್ಥ ಜೈಮ್ ಯಾರ್ಸಾ ತಿಳಿಸಿದ್ದಾರೆ.
ಫೀಫಾ ಅಂಡರ್ 17 ವಿಶ್ವಕಪ್ ನ ಡ್ರಾ ಮುಂಬೈಯಲ್ಲಿ ಜುಲೈ 7ರಂದು ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT