ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜನರ ಗಮನ ಸೆಳೆಯುತ್ತಿರುವ ನಕಲಿ ಲಯೋನೆಲ್ ಮೆಸ್ಸಿ!

ವಿಶ್ವ ಫುಟ್ ಬಾಲ್ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರ ಅರ್ಜೇಂಟೀನಾ ತಂಡದ ನಾಯಕ ಲಯೋನೆಲ್ ಮೆಸ್ಸಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇರಾನ್ ನಲ್ಲಿದ್ದು ಇದೀಗ...

ಲಯೋನಲ್ ಮೆಸ್ಸಿ
Vishwanath S
Updated On : 10 May 2017, 11:58 am
ನವದೆಹಲಿ: ವಿಶ್ವ ಫುಟ್ ಬಾಲ್ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರ ಅರ್ಜೇಂಟೀನಾ ತಂಡದ ನಾಯಕ ಲಯೋನೆಲ್ ಮೆಸ್ಸಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇರಾನ್ ನಲ್ಲಿದ್ದು ಇದೀಗ ಹೆಚ್ಚು ಜನಪ್ರಿಯನಾಗಿದ್ದಾನೆ. 
ಥೇಟ್ ಮೆಸ್ಸಿಯನ್ನೇ ಹೋಲುವಂತೆ ಇರುವ ಇರಾನಿನ ರೆಜಾ ಪರೇಸ್ತೇಶ್ ಇರಾನ್ ನಲ್ಲಿ ಹೆಚ್ಚು ಜನಪ್ರಿಯನಾಗಿದ್ದು ಆತನ ಜತೆ ಸೆಲ್ಫೀ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ. ರೆಜಾ ಪರೇಸ್ತೇಶ್ ರಸ್ತೆ ಮೇಲೆ ಬರುತ್ತಿದ್ದಂತೆ ಜನರು ಅವನನ್ನು ಮುತ್ತಿಕೊಳ್ಳಲುತ್ತಿದ್ದಾರೆ. ಇದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಉಂಟಾಗಿ ಈತನನ್ನು ಬಂಧಿಸಲು ಪೊಲೀಸರು ಮುಂದಾದ ಘಟನೆ ಸಹ ನಡೆದಿವೆ. 
ರೆಜಾ ಪರೇಸ್ತೇಶ್ ನೀನು ಅಚ್ಚು ಮೆಸ್ಸಿಯಂತೆ ಕಾಣುತ್ತಿಯ ಅಂತ ಸ್ನೇಹಿತರು ಹೇಳಿದ್ದರಿಂದ ಪ್ರೇರಿತನಾದ ಪರೇಸ್ತೇಶ್ ಬಾರ್ಸಿಯೋನಾ ತಂಡದಲ್ಲಿ ಮೆಸ್ಸಿ ತೋಡುವ ಜೆರ್ಸಿ ತೊಟ್ಟು ಟಿವಿಯೊಂದಕ್ಕೆ ಫೋಟೋ ಕಳುಹಿಸಿದ್ದರು. ತಕ್ಷಣವೇ ಟಿವಿ ಚಾನಲ್ ಸಂದರ್ಶನ ನಡೆಸಿತ್ತು. 

Advertisement

Advertisement

ಆನಂತರ ರೆಜಾರ ಜನಪ್ರಿಯತೆ ಇನ್ನೂ ಹೆಚ್ಚಾಗುತ್ತದೆ. ಸದ್ಯ ಇರಾನ್ ನ ಮೆಸ್ಸಿ ಎಂದೇ ಖ್ಯಾತಿ ಪಡೆದಿದ್ದಾನೆ. ಪರೇಸ್ತೇಶ್ ಕೂಡ ಫುಟ್ಬಾಲ್ ಆಡುತ್ತಾನೆ. ಆದರೆ ವೃತ್ತಿಪರ ಆಟಗಾರನಲ್ಲ. ಮೆಸ್ಸಿಯ ದೊಡ್ಡ ಅಭಿಮಾನಿ. ತನ್ನ ಜೀವನದಲ್ಲಿ ಮೆಸ್ಸಿಯನ್ನು ಭೇಟಿ ಮಾಡಬೇಕು ಎನ್ನುವ ಗುರಿಯನ್ನು ಹೊಂದಿದ್ದಾನೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments