ಭಾರತ ಮಹಿಳಾ ಹಾಕಿ ತಂಡ 
ಕ್ರೀಡೆ

ಮಹಿಳಾ ಹಾಕಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸತತ ನಾಲ್ಕನೆ ಸೋಲು

ಉತ್ತಮ ಪ್ರದರ್ಶನ ಮುಂದುವರೆಸಿರುವ ನ್ಯೂಜಿಲೆಂಡ್ ಮಹಿಳಾ ಹಾಕಿ ತಂಡ, ಭಾರತದ ವಿರುದ್ಧ ಐದು ಪಂದ್ಯಗಳ....

ಹ್ಯಾಮಿಲ್ಟನ್: ಉತ್ತಮ ಪ್ರದರ್ಶನ ಮುಂದುವರೆಸಿರುವ ನ್ಯೂಜಿಲೆಂಡ್ ಮಹಿಳಾ ಹಾಕಿ ತಂಡ, ಭಾರತದ ವಿರುದ್ಧ ಐದು ಪಂದ್ಯಗಳ ಸರಣಿಯ ನಾಲ್ಕನೆ ಪಂದ್ಯವನ್ನು 3-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.
ಇಂದು ನಡೆದ ನಾಲ್ಕನೆ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿತು. ಆದರೆ ನ್ಯೂಜಿಲೆಂಡ್ ನ ಅಕ್ರಮಣಕಾರಿ ಆಟದಿಂದಾಗಿ ಭಾರತೀಯ ವನಿತೆಯರು ಹೀನಾಯವಾಗಿ ಸೋಲು ಅನುಭವಿಸಿದರು.
ನ್ಯೂಜಿಲೆಂಡ್ ಪರ ರಾಚೆಲ್ ಮೆಕ್ಯಾನ್ (14ನೇ ನಿ. ಮತ್ತು 26ನೇ ನಿ.) ಎರಡು ಹಾಗೂ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಟೆಸ್ಸಾ ಜೋಪ್ಪ್ (17ನೇ ನಿ) ಒಂದು ಗೋಲು ಬಾರಿಸಿದರು.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದ ನವ್‌'ಜೋತ್ ಕೌರ್, ಭಾರತ ಪರ 100ನೇ ಪಂದ್ಯವನ್ನಾಡಿದರು.
ಈ ಹಿಂದಿನ ಮೂರು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ 4-1, 8-2 ಹಾಗೂ 3-2 ಗೋಲ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT