ನಿತಿನ್ ತೋಮರ್ 
ಕ್ರೀಡೆ

ಪ್ರೊ ಕಬಡ್ಡಿ: ಸ್ಟಾರ್ ರೈಡರ್ ನಿತಿನ್ ತೋಮರ್ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ

ಪ್ರೊ ಕಬಡ್ಡಿ ಲೀಗ್(ಪಿಕೆಎಲ್) 5ನೇ ಆವೃತ್ತಿಗೆ ವೇದಿಕೆ ಸಿದ್ಧವಾಗುತ್ತಿದ್ದು ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿಕೆಎಲ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ...

ನವದೆಹಲಿ: ಪ್ರೊ ಕಬಡ್ಡಿ ಲೀಗ್(ಪಿಕೆಎಲ್) 5ನೇ ಆವೃತ್ತಿಗೆ ವೇದಿಕೆ ಸಿದ್ಧವಾಗುತ್ತಿದ್ದು ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿಕೆಎಲ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ ಆಟಗಾರರ ಓಪನ್ ಬಿಡ್ ನಲ್ಲಿ ಸ್ಟಾರ್ ರೈಡರ್ ನಿತಿನ್ ತೋಮರ್ 93 ಲಕ್ಷಕ್ಕೆ ಬಿಕರಿಯಾಗಿದ್ದಾರೆ. 
ನಿತಿನ್ ತೋಮರ್ ನನ್ನು ಉತ್ತರಪ್ರದೇಶ ಖರೀದಿಸಿದ್ದಾರೆ. ಪಿಕೆಎಲ್ ಪ್ರಮುಖ ರೈಡರ್ ಆಗಿ ಗುರುತಿಸಿಕೊಂಡಿರುವ ಸರ್ವೀಸಸ್ ನ ನಿತಿನ್ ತೋಮರ್ ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಗಮನ ಸೆಳೆದಿದ್ದರು.
ಇನ್ನು ಬೆಂಗಳೂರು ಬುಲ್ಸ್ ತಂಡ ರೈಡರ್ ರೋಹಿತ್ ಕುಮಾರ್ ರನ್ನು 81 ಲಕ್ಷ ಹಾಗೂ ರವೀಂದ್ರ ಪಾಹಲ್ ರನ್ನು 50 ಲಕ್ಷ ರು. ಮೊತ್ತಕ್ಕೆ ಖರೀದಿ ಮಾಡಿದೆ. 
ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಆಟಗಾರರು
* ನಿತಿನ್ ತೋಮರ್,     93 ಲಕ್ಷ,           ಉತ್ತಪ್ರದೇಶ
* ರೋಹಿತ್ ಕುಮಾರ್   81 ಲಕ್ಷ,            ಬೆಂಗಳೂರು
* ಮಂಜಿತ್ ಚಿಲ್ಲರ್       75.50 ಲಕ್ಷ,        ಜೈಪುರ
* ಸುರ್ಜಿತ್ ಸಿಂಗ್        73 ಲಕ್ಷ,             ಕೋಲ್ಕತ್ತ
* ಸೆಲ್ವಮಣಿ                73 ಲಕ್ಷ,             ಜೈಪುರ
* ರಾಜೇಶ್ ನರ್ವಾಲ್   69 ಲಕ್ಷ,             ಉತ್ತರಪ್ರದೇಶ
* ಸಂದೀಪ್ ನರ್ವಾಲ್  66 ಲಕ್ಷ,             ಪುಣೆ
* ಅಮಿತ್ ಹೂಡಾ        63 ಲಕ್ಷ,             ಚೆನ್ನೈ
* ಜೀವ ಕುಮಾರ್        52 ಲಕ್ಷ,            ಉತ್ತರಪ್ರದೇಶ
* ಕುಲದೀಪ್ ಸಿಂಗ್      51.50 ಲಕ್ಷ,        ಮುಂಬೈ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT