ಬೆಂಗಳೂರು: ಜಗತ್ತಿನ ಖ್ಯಾತ ಕ್ರೀಡಾ ವೆಬ್ ಸೈಟ್ ಇಎಸ್‌ಪಿಎನ್ ಪ್ರಕಟಿಸಿರುವ ವಿಶ್ವದ 100 ಜನಪ್ರಿಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 13ನೇ ಸ್ಥಾನ ಪಡೆದಿದ್ದಾರೆ.
ಅಥ್ಲೀಟ್ ಗಳ ಜಾಹೀರಾತು ಒಪ್ಪಂದಗಳು, ಸಾಮಾಜಿಕ ಜಾಲತಾಣದಲ್ಲಿನ ಪ್ರಖ್ಯಾತಿ ಹಾಗೂ ಗೂಗಲ್ ಸರ್ಚ್ ನ ಜನಪ್ರಿಯತೆ ಆಧರಿಸಿ ಇಎಸ್‌ಪಿಎನ್ 100 ಜನಪ್ರಿಯ ಕ್ರೀಡಾಪಟುಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕೊಹ್ಲಿ ಜತೆಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 15ನೇ ಸ್ಥಾನ ಪಡೆದಿದ್ದಾರೆ. ಇನ್ನು ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್(90) ಮತ್ತು ಸುರೇಶ್ ರೈನಾ(95)ನೇ ಸ್ಥಾನ ಪಡೆದಿದ್ದಾರೆ. ಈ ನಾಲ್ವರು ಜನಪ್ರಿಯ ಆಟಗಾರರನ್ನು ಬಿಟ್ಟರೆ ಭಾರತ ಮತ್ಯಾವ ಕ್ರೀಡಾಪಟುಗಳು ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ.
ಪೋರ್ಚುಗಲ್ ಫುಟ್ ಬಾಲ್ ಸೆನ್ಸೆಷನ್ ಕ್ರಿಶ್ಚಿಯಾನೊ ರೊನಾಲ್ಡೊ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅಮೆರಿಕದ ಬಾಸ್ಕೆಟ್ ಬಾಲ್ ದಿಗ್ಗಜ ಲೆಬ್ರಾನ್ ಜೇಮ್ಸ್, ಅರ್ಜೇಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ.