ಕಿಡಂಬಿ ಶ್ರೀಕಾಂತ್ 
ಕ್ರೀಡೆ

ವೃತ್ತಿ ಜೀವನದ ಅತ್ಯುತ್ತಮ ರ್ಯಾಕಿಂಗ್ ಗಳಿಸಿದ ಕಿಡಂಬಿ ಶ್ರೀಕಾಂತ್ ಈಗ ವಿಶ್ವದ ನಂ.2 ಆಟಗಾರ

ಬಿಡಬ್ಲ್ಯುಎಫ್ ಗುರುವಾರ ಬಿಡುಗಡೆ ಮಾಡಿರುವ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ....

ನವದೆಹಲಿ: ಬಿಡಬ್ಲ್ಯುಎಫ್ ಗುರುವಾರ ಬಿಡುಗಡೆ ಮಾಡಿರುವ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಅವರು ಎರಡನೇ ಸ್ಥಾನ ಪಡೆಯುವ ಮೂಲಕ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
25 ವರ್ಷದ ಕಿಡಂಬಿ ಶ್ರೀಕಾಂತ್ ಅವರು ಪ್ರಸಕ್ತ ಸಾಲಿನಲ್ಲಿ ಐದು ಸೂಪರ್ ಸಿರೀಸ್ ಫೈನಲ್‌ಗಳ ಪೈಕಿ ನಾಲ್ಕರಲ್ಲಿ ಪ್ರಶಸ್ತಿ ಗೆದ್ದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಡೆನ್ಮಾರ್ಕ್ ನ ವಿಕ್ಟರ್ ಆಕ್ಸೆಲ್ಸನ್ ಅವರು ಮೊದಲ ಸ್ಥಾನದಲ್ಲಿದ್ದಾರೆ. 
ಫ್ರೆಂಚ್ ಓಪನ್ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಕಿಡಂಬಿ ಇದೀಗ ಜೀವನಶ್ರೇಷ್ಠ ನಂ.2 ಸ್ಥಾನಕ್ಕೇರಿದ್ದಾರೆ. 
ಬ್ಯಾಡ್ಮಿಂಟನ್ ಇತಿಹಾಸದಲ್ಲೇ ಭಾರತದ ಪರ ಅತಿ ಹೆಚ್ಚು 73,403 ರೇಟಿಂಗ್ ಪಾಯಿಂಟ್‌ಗಳನ್ನು ಶ್ರೀಕಾಂತ್ ಕಲೆ ಹಾಕಿದ್ದಾರೆ.
ಮಗದೋರ್ವ ಭಾರತೀಯ ಬ್ಯಾಡ್ಮಿಂಟನ್ ಪಟು ಎಚ್‌ಎಸ್ ಪ್ರಣೋಯ್ ಸಹ ಒಂದು ಸ್ಥಾನ ಸುಧಾರಿಸಿಕೊಂಡು ಜೀವನಶ್ರೇಷ್ಠ 11ನೇ ಸ್ಥಾನಕ್ಕೆ ತಲುಪಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧೂ ಮತ್ತು ಸೈನಾ ನೆಹ್ವಾಲ್ ಅನುಕ್ರಮವಾಗಿ ನಂ.2 ಮತ್ತು ನಂ.11ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!