ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯಾ ಕಪ್ ಹಾಕಿ: ಸೆಮಿ ಫೈನಲ್ ತಲುಪಿದ ಭಾರತ

ಪಾನ್ ನ ಕಕಮಿಗಹರನಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಮಹಿಳಾ ಹಾಕಿ ಪಡೆ ಸೆಮಿಫೈನಲ್ ಪ್ರವೇಶಿಸಿದೆ.

ಏಷ್ಯಾ ಕಪ್ ಹಾಕಿ: ಸೆಮಿ ಫೈನಲ್ ತಲುಪಿದ ಭಾರತ
Raghavendra Adiga
Updated On : 3 Nov 2017, 12:25 pm
ಕಕಮಿಗಹರ: ಜಪಾನ್ ನ ಕಕಮಿಗಹರನಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಮಹಿಳಾ  ಹಾಕಿ ಪಡೆ  ಸೆಮಿಫೈನಲ್ ಪ್ರವೇಶಿಸಿದೆ. ನಿನ್ನೆ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಮಹಿಳೆಯರು ಕಜಕಸ್ತಾನವನ್ನು 7–1 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ಗುರ್ಜಿತ್ ಕೌರ್ ಅವರು ಮೂರು (4 ', 42' ಮತ್ತು 56 '), ನವನೀತ್ ಕೌರ್ ಎರಡು (22 'ಮತ್ತು 27'), ಡೀಪ್ ಗ್ರೇಸ್ ಎರಡು ಪೆನಾಲ್ಟಿ ಗೋಲು (16 'ಮತ್ತು 41') ದಾಖಲಿಸುವುದರೊಡನೆ ಭಾರತ ಪಂದ್ಯಾವಳಿಯಲ್ಲಿ ಅಜೇಯನಾಗಿ ಉಳಿಯಿತು ಮತ್ತು ಸೆಮಿ ಫೈನಲ್ ಪ್ರವೇಶಿಸಿತು.
ಇದಕ್ಕೂ ಮುನ್ನ ಪಂದ್ಯ ಪ್ರಾರಂಭವಾದ ಎರಡನೇ ನಿಮಿಷದಲ್ಲೇ ಕಜಕಸ್ತಾನ ತನ್ನ ಮೊದಲ ಗೋಲು ದಾಖಲಿಸಿತ್ತು. ಆದರೆ ಆಟದ ಮುಂದಿನ ಹಂತಗಳಲ್ಲಿ ಭಾರತೀಯ ಮಹಿಳಾ ತಂಡದ ದಾಳಿಗೆ ಕಂಗೆಟ್ಟು ಗೋಲು ಗಳಿಸುವುದಕ್ಕೆ ವಿಪಲವಾಯಿತು..

Advertisement

Advertisement

ಮುಂದೆ ನಡೆವ ಸೆಮಿ ಫೈನಲ್ ಸುತ್ತಿನಲ್ಲಿ ಭಾರತೀಯ ವನಿತೆಯರು ಜಪಾನ್ ತಂಡವನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments