ಕ್ರೀಡೆ

ಪುರುಷರ ಬಳಿಕ ಏಷ್ಯಾ ಕಪ್ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮಹಿಳಾ ತಂಡ

Vishwanath S
ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಚೀನಾವನ್ನು ಮಣಿಸಿ ಏಷ್ಯಾ ಕಪ್ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 
ಜಪಾನ್ ನ ಕಾಕಮಿಗಾರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಚೀನಾವನ್ನು 5-4 ಗೋಲುಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. 
ನಿಗದಿತ ಸಮಯದಲ್ಲಿ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೂ 5 ಶೂಟ್ ಔಟ್ ಗೋಲುಗಳನ್ನು ನೀಡಲಾಯಿತು. ಈ ಶೂಟ್ ಔಟ್ ನಲ್ಲಿ ಭಾರತ 5 ಗೋಲುಗಳನ್ನು ಸಿಡಿಸಿತು. 
ಏಷ್ಯಾ ಕಪ್ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್ಐಎಚ್) 2018ರ ವಿಶ್ವಕಪ್ ಗೆ ಎಂಟ್ರಿ ಪಡೆದಿದೆ. 
SCROLL FOR NEXT